ಮದುವೆಯಾಗಿ ಗಂಡನ ಮನೆ ಹೊಸ್ತಿಲು ತುಳಿಯುವುದರೊಳಗೇ ನಡೆಯಿತು ದುರಂತ!

marriage
Published on

ಲಖನೌ: ಮದುವೆಯಾದ ಹೆಣ್ಣು ಮಗಳೊಬ್ಬಳು ಗಂಡನ ಮನೆ ಹೊಸ್ತಿಲು ತುಳಿಯುವದರೊಳಗೆ ಗಂಡನ ಕೆನ್ನೆಗೆ ಹೊಡೆದು ತವರು ಮನೆಗೆ ವಾಪಸು ಬಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಗೆ ಕಾರಣ ಪತಿರಾಯನ ಪ್ರೇಮ ಪುರಾಣ ಎನ್ನಲಾಗಿದೆ.

ಜೌನ್‌ಪುರ ಜಿಲ್ಲೆಯ ಖುತಾಹನ್ ಬ್ಲಾಕ್‌ನ ಲವಾಯೆನ್ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ವಧುವಿನ ಮನೆಯಲ್ಲಿ ವಿಜೃಂಭಣೆಯಿಂದ ಮದುವೆ ಮಾಡಿ, ಮಗಳು ಮತ್ತು ಅಳಿಯನನ್ನು ಕಳುಹಿಸಿಕೊಡಲಾಗಿದೆ. ಮದುವೆಯ ದಿಬ್ಬಣದಲ್ಲಿ ಹೆಂಡತಿಯನ್ನು ಕರೆದುಕೊಂಡು ವಾಪಸು ಮನೆಗೆ ಬಂದ ವರನಿಗೆ ಆತನ ಮನೆ ಮುಂದೆ ಕಾರು ಇಳಿಯುತ್ತಿದ್ದಂತೆಯೇ ವಧು ಕೆನ್ನೆಗೆ ಬಾರಿಸಿದ್ದಾಳೆ. ಸೊಸೆಗೆ ಆರತಿ ಮಾಡಿ ಮನೆ ತುಂಬಿಸಿಕೊಳ್ಳಬೇಕೆಂದು ಕಾಯುತ್ತಿದ್ದ ವಧುವಿನ ಕುಟುಂಬಕ್ಕೆ ಶಾಕ್ ಕೊಟ್ಟಿದ್ದಾಳೆ.

ಗಂಡನಿಗೆ ಹೊಡೆದ ಯುವತಿ ಸೀದಾ ವರನ ಮನೆಯೊಳಗೆ ಹೋಗಿ, ಲೆಹೆಂಗಾವನ್ನು ಬಿಚ್ಚಿ ಬೇರೆ ಬಟ್ಟೆ ಹಾಕಿಕೊಂಡು ತವರು ಮನೆಗೆ ವಾಪಸು ನಡೆದಿದ್ದಾಳೆ. ಗಂಡ ಈ ಹಿಂದೆ ಬೇರೊಬ್ಬಳನ್ನು ಪ್ರೀತಿಸಿದ್ದರಿಂದಾಗಿಯೇ ಇದೆಲ್ಲ ಆಗಿದ್ದಾಗಿ ಹೇಳಲಾಗಿದೆ. ಕುಟುಂಬಸ್ಥರ ಮಾತಿಗೆ ಕರಗದ ನವ ದಂಪತಿಯನ್ನು ಪೊಲೀಸರು ಮನವೊಲಿಸಿ ಒಂದು ಮಾಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net