ಟ್ರಕ್ ಡ್ರೖೆವರ್ ಈಗ ನಂ.1 ಶ್ರೀಮಂತ!

Truck Driver
Published on

ವೆಲ್ಲಿಂಗ್ಟನ್: ಹೈಸ್ಕೂಲ್ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು, ಟ್ರಕ್ ಡ್ರೖೆವರ್ ಆಗಿ ಕೆಲಸ ಮಾಡುತ್ತಿದ್ದ ಗ್ರೇಮ್ ಹಾರ್ಟ್ ಈಗ ನ್ಯೂಜಿಲೆಂಡ್​ನ ಶ್ರೀಮಂತ ಎಂಬ ಕೀರ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ವಾಹನಗಳ ರಿಪೇರಿ ಮಾಡುತ್ತಿದ್ದ ಗ್ರೇಮ್ ಹಂತ ಹಂತವಾಗಿ ವ್ಯಾಪಾರ- ವಹಿವಾಟು ನಡೆಸಿ, ಉದ್ದಿಮೆಗಳನ್ನು ಸಾಪಿಸಿ, ಇಂದು ಸ್ವತಃ ಕೋಟ್ಯಂತರ ರೂಪಾಯಿ ಮೌಲ್ಯದ ನೌಕೆಗಳು, ಜಲಾಂತರ್ಗಾಮಿಗಳ ಒಡೆಯರಾಗಿದ್ದಾರೆ. ಗ್ರೇಮ್ ಒಡೆತನದ ರೆನಾಲ್ಡ್್ಸ ಕನ್ಸೂ್ಯಮರ್ ಪ್ರಾಡಕ್ಟ್ ಇಂಕ್​ನ ಷೇರುಗಳ ಮೌಲ್ಯ ಕಳೆದ ವಾರ ಭಾರೀ ಏರಿಕೆ ದಾಖಲಿಸಿದ ನಂತರ ಗ್ರೇಮ್ ಸಂಪತ್ತು ಮತ್ತಷ್ಟು ಹೆಚ್ಚಳವಾಗಿದೆ.

ಬ್ಲೂಮ್​ಗ್ ಬಿಲೇನಿಯರ್ಸ್ ಸೂಚ್ಯಂಕದ ಪ್ರಕಾರ, ಗ್ರೇಮ್ ಕಂಪನಿಯ ಷೇರು ಮೌಲ್ಯ ಶೇ. 9.8 ಏರಿಕೆ ಕಂಡು 28.55 ಡಾಲರ್​ಗೆ ತಲುಪಿದೆ. ಗ್ರೇಮ್ ಹಾರ್ಟ್ ಇತ್ತೀಚೆಗೆ 200 ಮಿಲಿಯನ್ ಡಾಲರ್ ಮೌಲ್ಯದ 116 ಮೀಟರ್ ಉದ್ದದ ಐಷಾರಾಮಿ ನೌಕೆಯೊಂದನ್ನು ಖರೀದಿಸಿದ್ದು, ಇದರಲ್ಲಿ ಹೆಲಿಪ್ಯಾಡ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net