

ನ್ಯೂಯಾರ್ಕ್: ಜೇನುನೊಣಗಳನ್ನು ನೋಡಿದರೆ ಭಯವಾಗುತ್ತದೆ. ಎರಡು ಮೂರು ಜೇನುನೊಣಗಳನ್ನು ಕಂಡರೆ ಓಡಿ ಹೋಗುತ್ತೇವೆ. ಹೀಗಿರುವಾಗ ಇಡೀ ನಗರವೇ ಜೇನುನೊಣಗಳಿಂದ ತುಂಬಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನ್ಯೂಯಾರ್ಕ್ನ ಐಕಾನಿಕ್ ಟೈಮ್ಸ್ ಸ್ಕ್ವೇರ್ನ ಜನರಿಗೆ ಜೇನುನೊಣದಿಂದ ಸಂಕಷ್ಟ ಎದುರಾಗಿದೆ. ಇಡೀ ನಗರವನ್ನು ಜೇನುನೊಣಗಳು ಮುತ್ತಿಗೆ ಹಾಕಿವೆ. ಪ್ರಾಣಿಶಾಸ್ತ್ರಜ್ಞ ಮೈಕಲ್ ಬ್ಲಾಂಕ್ ಅವರು ಈ ವೀಡಿಯೊವನ್ನು ಇನ್ಸ್ಟಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಹನುಮಂತನಿಗೆ ಮೀಸಲಿಡುವ ಖಾಲಿ ಸೀಟಿನ ಪಕ್ಕದ ಸೀಟಿಗೆ ದುಬಾರಿ ಬೆಲೆಯಂತೆ! ಆದಿಪುರುಷ್ ಚಿತ್ರತಂಡ ಹೇಳಿದ್ದಿಷ್ಟು… ವಿಡಿಯೋದಲ್ಲಿ ಏನಿದೆ?: ಜೇನುನೊಣಗಳ ಹಿಂಡುಗಳನ್ನು ಕಾಣಬಹುದು. ಟೆರೇಸ್, ಹೋಟೆಲ್, ಕಟ್ಟಡದ ಮೇಲೆ ಕಾಣುತ್ತವೆ.
ಸ್ಥಳೀಯರು ತೀವ್ರ ಆತಂಕದಿಂದ ಅಧಿಕಾರಿಗಳಿಗೆ ದೂರು ನೀಡಿದರು. ಅವುಗಳಿಂದ ಜನರನ್ನು ರಕ್ಷಿಸಲು ಅಧಿಕಾರಿಗಳು ಜೇನುನೊಣ ತಜ್ಞರನ್ನು ಸಂಪರ್ಕಿಸಿದ್ದಾರೆ. ಈ ವಿಡಿಯೋ ಅಪ್ಲೋಡ್ ಆಗಿ ಎರಡು ದಿನಗಳಾಗಿವೆ. ಕೆಲವರು ಜೇನುನೊಣಗಳ ಸಂರಕ್ಷಣೆ ಮಾಡುತ್ತಿದ್ದಾರೆ. ಕೀಟಗಳು ಆಹಾರ ಮತ್ತು ಆಶ್ರಯಕ್ಕಾಗಿ ತಮ್ಮ ಹುಡುಕಾಟದಲ್ಲಿ ಹೊಸ ಆವಾಸಸ್ಥಾನಗಳನ್ನು ಹುಡುಕುತ್ತವೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.