ಹೊಸ ವರ್ಷ ಸಂಭ್ರಮಾಚರಣೆ ಬಳಿಕ ಕುಡಿದ ನಶೆಯಲ್ಲಿ ವಾಹನ ಚಲಾಯಿಸುವ ರಿಸ್ಕ್​ ಬೇಡ, ಕರೆ ಮಾಡಿದ್ರೆ ಪಿಕ್ ಮಾಡಲು ಬರುತ್ತದೆ ಫ್ರೀ ಕ್ಯಾಬ್, ಬೈಕ್..!

cab
Published on

Free Taxi for new year : ಡಿಸೆಂಬರ್ 31 ಮತ್ತು ಇಂದು ರಾತ್ರಿ 12 ಗಂಟೆಯಿಂದ ಹೊಸ ವರ್ಷ ಪ್ರಾರಂಭವಾಗಲಿದೆ. ನ್ಯೂ ಇಯರ್​​ ಅಂದ್ರೆ ಕೇಳ್ಬೇಕಾ ಬೆಂಗಳೂರಿನ ನಗರಗಳಲ್ಲಿ ಸಂಭ್ರಮಾಚರಣೆ ಜೋರಾಗಿಯೇ ಇರುತ್ತೆ. ಹೀಗಿದ್ದಾಗ ಪಾರ್ಟಿ ಮುಗಿಸಿಕೊಂಡು ಮತ್ತೆ ಮನೆ ಸೇರೋದು ಹೇಗೆ ಅನ್ನೋ ಚಿಂತೆ ಇದ್ದೇ ಇರುತ್ತೆ.

ಹೊಸ ವರ್ಷದ ಪಾರ್ಟಿ ಮುಗಿಸಿಕೊಂಡವರನ್ನು ಸುರಕ್ಷಿತವಾಗಿ ಮನೆಗೆ ಸೇರಿಸುವ ಜವಾಬ್ದಾರಿಯನ್ನು ತೆಲಂಗಾಣ ಫೋರ್ ವೀಲರ್ ಅಸೋಸಿಯೇಷನ್ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಬಹು ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಹೊಸ ವರ್ಷಾಚರಣೆಯಂದು ಜನರಿಗೆ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಂಘ ತಿಳಿಸಿದೆ. ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲು 500 ಕಾರುಗಳು ಮತ್ತು 250 ಬೈಕ್ ಟ್ಯಾಕ್ಸಿಗಳು ಲಭ್ಯವಿರುತ್ತವೆ ಎಂದು ಸಂಘ ತಿಳಿಸಿದೆ.

ಈ ಸಂಖ್ಯೆಗೆ ಕರೆ ಮಾಡಿ :

ತೆಲಂಗಾಣ ಫೋರ್ ವೀಲರ್ ಅಸೋಸಿಯೇಷನ್ ​​ಎಲ್ಲರೂ ಈ ಸೇವೆಯನ್ನು ಬಳಸಿಕೊಳ್ಳುವಂತೆ ವಿನಂತಿಸಿದೆ.ಸಂತೋಷದ ಸಂದರ್ಭದಲ್ಲಿ ಯಾವುದೇ ದುರಂತ ಘಟನೆಯನ್ನು ತಪ್ಪಿಸಲು ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಉಚಿತ ಪ್ರಯಾಣವನ್ನು ಪಡೆಯಲು ಬಯಸುವವರು ದೂರವಾಣಿ ಸಂಖ್ಯೆ 9177624678 ಗೆ ಕರೆ ಮಾಡಬಹುದು. ಹೈದರಾಬಾದ್, ಸೈಬರಾಬಾದ್ ಮತ್ತು ರಾಚಕೊಂಡದಲ್ಲಿ ರಾತ್ರಿ 10 ರಿಂದ ಮಧ್ಯರಾತ್ರಿ 1 ಗಂಟೆಯವರೆಗೆ ಈ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net