ಹವಾಯಿ: ಸೂರ್ಯಮಂಡಲದ ಅಧಿಪತಿ ಸೂರ್ಯನ ಅತ್ಯಂತ ಹತ್ತಿರದ ಫೋಟೋವನ್ನು ಅಮೆರಿಕದ ಬಾಹ್ಯಾಕಾಶ ತಜ್ಞರು ಬಿಡುಗಡೆ ಮಾಡಿದ್ದಾರೆ. ಪ್ರಪಂಚದಲ್ಲೇ ಅತ್ಯಂತ ದೊಡ್ಡ ದೂರದರ್ಶಕವಾಗಿರುವ ಡೇನಿಯಲ್ ಕೆ.ಇನೌವೆ ಸೋಲಾರ್ ದೂರದರ್ಶಕದ (ಡಿಕೆಐಎಸ್ಟಿ) ತೆಗೆದಿರುವ ಈ ಪೋಟೋದಲ್ಲಿ ಸೂರ್ಯನ ಮೇಲ್ಮೈ ಥೇಟ್ ಶೇಂಗಾ ಚಿಕ್ಕಿಯಂತೆಯೇ ಕಾಣಿಸುತ್ತಿದ್ದು, ನೋಡುಗರಿಗೆ ಕುತೂಹಲ ಮೂಡಿಸಿದೆ.
ಸೂರ್ಯನ ಮೇಲ್ಮೈ ಪ್ಲಾಸ್ಮಾದಿಂದ ತುಂಬಿದ್ದು, ಇದರ ಫೋಟೋವನ್ನು ಹವಾಯಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋಟೋದಲ್ಲಿ ಬಂಗಾರದ ಬಣ್ಣದ ಪ್ಲಾಸ್ಮಾಗಳನ್ನು ಗಮನಿಸಬಹುದಾಗಿದೆ. ಅಲ್ಲಲ್ಲಿ ಕಪ್ಪು ಬಣ್ಣದ ರೇಖೆಗಳಿದ್ದು, ಅದು ಸೂರ್ಯನ ಒಳಮೈನೊಂದಿಗೆ ಪ್ಲಾಸ್ಮಾ ಸಂಪರ್ಕ ಹೊಂದಿರುವ ಸ್ಥಳವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಪ್ಲಾಸ್ಮಾದ ಅನೇಕ ಕೋಶಗಳು ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಪ್ರತಿ ಕೋಶವೂ ನೂರಾರು ಕಿಲೋಮೀಟರ್ನಷ್ಟು ವ್ಯಾಪ್ತಿ ಹೊಂದಿದೆ.
ಈ ಹಿಂದೆಯೂ ಸಹ ಅನೇಕ ದೂರದರ್ಶಕಗಳ ಮೂಲಕ ಸೂರ್ಯನ ಮೇಲ್ಮೈ ಫೋಟೋ ತೆಗೆಯಲಾಗಿತ್ತು. ಆದರೆ ಈ ಹಿಂದೆ ತೆಗೆದ ಫೋಟೋಗಳಿಗೆ ಹೋಲಿಸಿದರೆ ಈ ಫೋಟೋ ಐದು ಪಟ್ಟು ಹೆಚ್ಚಿನ ರೆಸಲ್ಯೂಷನ್ ಹೊಂದಿದೆ ಎನ್ನಲಾಗಿದೆ. ಫೋಟೋ ಜತೆ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಸೂರ್ಯನ ಮೇಲ್ಮೈನ 200 ಮಿಲಿಯನ್ ಚದರ ಕಿ.ಮೀ. ಜಾಗದಲ್ಲಿ 10 ನಿಮಿಷಗಳ ಕಾಲದಲ್ಲಿ ಆಗುವ ಬದಲಾವಣೆಗಳನ್ನು ಚಿತ್ರೀಕರಿಸಲಾಗಿದೆ. 10 ನಿಮಿಷಗಳ ವಿಡಿಯೋವನ್ನು 14 ಸೆಕೆಂಡುಗಳಿಗೆ ಕ್ರೋಢೀಕರಿಸಲಾಗಿದೆ. ಡಿಸೆಂಬರ್ 10ರಂದು ಈ ಫೋಟೋ ಮತ್ತು ವಿಡಿಯೋವನ್ನು ಚಿತ್ರೀಕರಿಸಿರುವುದಾಗಿ ಡಿಕೆಐಎಸ್ಟಿಯ ನಿರ್ದೇಶಕ ಥಾಮಸ್ ರಿಮ್ಮೆಲೆ ತಿಳಿಸಿದ್ದಾರೆ. ಮುಂದಿನ ಆರು ತಿಂಗಳುಗಳಲ್ಲಿ ಸೂರ್ಯನ ಬಗ್ಗೆ ಇನ್ನಷ್ಟು ವಿಷಯಗಳನ್ನು ಅಧ್ಯಯನ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಡಿಕೆಐಎಸ್ಟಿ ಕೇವಲ ಸೂರ್ಯನ ಮೇಲ್ಮೈನ ಫೋಟೋ ತೆಗೆಯುವುದು ಮಾತ್ರವಲ್ಲದೆ ಅಲ್ಲಿನ ಕಾಂತೀಯ ಕ್ಷೇತ್ರದ ಬಗ್ಗೆಯೂ ಮಾಹಿತಿ ನೀಡಲಿದೆ. ಇದರಿಂದ ಸೂರ್ಯನ ಕೆಲವು ರಹಸ್ಯಗಳನ್ನು ಭೇದಿಸಲು ಸಹಾಯವಾಗಲಿದೆ ಎಂದು ಥಾಮಸ್ ತಿಳಿಸಿದ್ದಾರೆ.
ಇಂದು ಸೂರ್ಯನ ಫೋಟೋ ಬಿಡುಗಡೆಗೊಳ್ಳುತ್ತಿದ್ದಂತೆಯೇ ಜನಸಾಮಾನ್ಯರು ಈ ಫೋಟೋ ಮತ್ತು ವಿಡಿಯೋ ಬಗ್ಗೆ ಭಾರಿ ಪ್ರಮಾಣದ ಚರ್ಚೆ ಆರಂಭಿಸಿದ್ದಾರೆ. ಥೇಟ್ ಚಿಕ್ಕಿಯಂತೆ ಕಾಣುವ ಈ ಫೋಟೋವನ್ನು ನಿಜವಾದ ಚಿಕ್ಕಿ ಫೋಟೋ ಜತೆ ಕೊಲ್ಯಾಜ್ ಮಾಡಿ ಟ್ವಿಟರ್ನಲ್ಲಿ ಹಾಕುತ್ತಿದ್ದಾರೆ ಟ್ವಿಟ್ಟಿಗರು. ಕೇವಲ ಚಿಕ್ಕಿ ಮಾತ್ರವಲ್ಲದೆ, ಮೆಕ್ಕೆ ಜೋಳ ಮತ್ತು ಪಾಪ್ ಕಾರ್ನ್ಗೂ ಸಹ ಸೂರ್ಯನನ್ನು ಹೋಲಿಕೆ ಮಾಡಲಾಗುತ್ತಿದೆ. (ಏಜೆನ್ಸೀಸ್)