ಫೇಸ್​ಬುಕ್​ಗಿದು ಕಡೇ ಸಮನ್ಸ್​, ಹಾಜರಾಗಲು ದೆಹಲಿ ಸದನದ ತಾಕೀತು...

facebook
Published on

ನವದೆಹಲಿ: ದೆಹಲಿ ವಿಧಾನಸಭೆಯ ಶಾಂತಿ ಹಾಗೂ ಸೌಹಾರ್ದ ಸಮಿತಿಯು ಫೇಸ್​ಬುಕ್​ ಸಂಸ್ಥೆಗೆ ಹೊಸ ಹಾಗೂ ಅಂತಿಮ ಸಮನ್ಸ್ ಜಾರಿ ಮಾಡಿದೆ.

ಫೇಸ್​ಬುಕ್​ ಇಂಡಿಯಾದ ಪ್ರತಿನಿಧಿಗಳು ಬುಧವಾರದೊಳಗೆ ಸಮಿತಿ ಮುಂದೆ ಹಾಜರಾಗಬೇಕು ಎಂಬುದಾಗಿ ಸಮನ್ಸ್​ ಮೂಲಕ ತಾಕೀತು ಮಾಡಲಾಗಿದೆ. ದ್ವೇಷಪೂರಿತ ಪೋಸ್ಟ್ ಸಂಬಂಧ ನಿಯಮ ರೂಪಿಸಲು ಫೇಸ್​ಬುಕ್​ ಉದ್ದೇಶಪೂರ್ವಕವಾಗಿ ನಿರಾಸಕ್ತಿ ತೋರುತ್ತಿದೆ ಎಂಬ ಹಿನ್ನೆಲೆಯಲ್ಲಿ ಈ ಸಮನ್ಸ್ ಜಾರಿಗೊಳಿಸಲಾಗಿದೆ.

ಸೆ. 15ರಂದು ಈಗಾಗಲೇ ಒಂದು ಸಮನ್ಸ್​ ನೀಡಲಾಗಿದ್ದರೂ ಫೇಸ್​ಬುಕ್​ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್, ಈ ಸಂಬಂಧ ಈಗಾಗಲೇ ಸಂಸತ್​ ಸಮಿತಿ ಮುಂದೆ ಹಾಜರಾಗಿರುವುದರಿಂದ ದೆಹಲಿಯ ಸದನ ಸಮನ್ಸ್ ಹಿಂಪಡೆದುಕೊಳ್ಳಬೇಕು ಎಂದು ಕೋರಿದ್ದರು. ಅದಕ್ಕೊಪ್ಪದ ಸಮಿತಿ ಹೊಸದಾಗಿ ಮತ್ತೊಂದು ಸಮನ್ಸ್​ ಜಾರಿ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net