ದೊಡ್ಡ ಸಮಾರಂಭ, ಸಭೆ, ವಿಜಯೋತ್ಸವಕ್ಕೆ ಹೊಸ ಎಸ್‌ಒಪಿಗೆ ಸೂಚನೆ

Parameswar Crime11
Published on

ಬೆಂಗಳೂರು: ದೊಡ್ಡ ಸಮಾರಂಭ, ಸಭೆ ಮತ್ತು ವಿಜಯೋತ್ಸವ ಕಾರ್ಯಕ್ರಮಗಳಿಗೆ ಹೊಸ ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿವ್ ಪ್ರೊಸಿಜರ್) ರೂಪಿಸುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.

ಇಂತಹ ಘಟನೆಗಳು ಆಗಬಾರದು ಎಂಬ ವಿಚಾರದಲ್ಲಿ ಗೃಹ ಇಲಾಖೆಯಿಂದ ಹೊಸ ಎಸ್‌ಒಪಿ ಮಾಡುತ್ತೇವೆ. ಇನ್ನು ಮುಂದೆ ದೊಡ್ಡ ಸಮಾರಂಭ, ಸಭೆ, ವಿಜಯೋತ್ಸವ ನಡೆಯುವಾಗ ಪೊಲೀಸ್ ಇಲಾಖೆಯ ನಿರ್ದೇಶನ ಏನು ಬರುತ್ತದೆ ಅದರ ಚೌಕಟ್ಟಿನಲ್ಲಿ ಕಾರ್ಯಕ್ರಮಗಳನ್ನು ಮಾಡಬೇಕು.

34 ಸಾವಿರ ಸೀಟುಗಳ ಸಾಮಾರ್ಥ್ಯ ಇರುವ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 3 ಲಕ್ಷ ಜನ ಬಂದಿದ್ದರು. ಮೆಟ್ರೋ ಸಂಸ್ಥೆಯವರು ನೀಡಿರುವ ಮಾಹಿತಿ ಪ್ರಕಾರ ಬೆಳಗ್ಗೆ 9 ಗಂಟೆಯಿಂದ ರಾತ್ರಿ 11 ಗಂಟೆವರೆಗೆ 8.7 ಲಕ್ಷ ಜನ ಪ್ರಯಾಣ ಮಾಡಿದ್ದಾರೆ ಎಂದರು.

ಹೊಸ ಎಸ್‌ಒಪಿಯಲ್ಲಿ ಏನೆಲ್ಲ ಇರಲಿದೆ..?

*ಆಯೋಜಕರಿಗೆ ಷರತ್ತಿನ ಮೇಲೆ ಅನುಮತಿ

*ಎಷ್ಟು ಜನ ಸೇರಲಿದ್ದಾರೆ ಎಂಬ ಮಾಹಿತಿ ನೀಡುವ ಜವಾಬ್ದಾರಿ ಆಯೋಜಕರದು

*ಗುಪ್ತಚರ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ ಪಾಲನೆ ಮಾಡಬೇಕು

*ಪೊಲೀಸ್ ಅನುಮತಿ ಇಲ್ಲದೆ ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ

*ಆಯೋಜನೆ ಮಾಡುವ ಜಾಗದಲ್ಲಿ ಜನ ಸೇರುವ ಸಾಮರ್ಥ್ಯ ಪರಿಶೀಲನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net