

ಹೈದರಾಬಾದ್: ಪುಷ್ಪ 2 ದಿ ರೂಲ್ ಅಲ್ಲು ಅರ್ಜುನ್ ಅಭಿನಯದ ಸುಕುಮಾರ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಲನ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಡಿಸೆಂಬರ್ 6 ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಈ ಬಗ್ಗೆ ತಿಳಿಸುವ ಹೊಸ ಪೋಸ್ಟರ್ ಅನ್ನು ಚಿತ್ರತಂಡ ಇತ್ತೀಚೆಗೆ ಹಂಚಿಕೊಂಡಿದೆ.
ಇದನ್ನೂ ಓದಿ: ನಟಿ ನಮಿತಾ ಕ್ಷಮೆ ಯಾಚಿಸಿದ ತಮಿಳುನಾಡು ಧಾರ್ಮಿಕ ಸಚಿವ
ಇನ್ನು 100 ದಿನಗಳಲ್ಲಿ ಚಿತ್ರವನ್ನು ನೋಡುತ್ತೀರಿ. ಅದ್ಭುತ ಅನುಭವಕ್ಕೆ ಸಿದ್ಧರಾಗಿ ಎಂದು ತಂಡ ಹೇಳಿದೆ. ಈ ಬಗ್ಗೆ ಅಭಿಮಾನಿಗಳು ಖುಷಿಯಾಗಿದ್ದಾರೆ. ನಿರೀಕ್ಷಿಸಲಾಗುತ್ತಿದೆ, ಕಾಯುತ್ತಿದ್ದೇವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಮೊದಲ ಭಾಗವನ್ನು ಮೀರಿ 'ಪುಷ್ಪ 2' ಇರುತ್ತದೆ ಎಂದು ಸುಕುಮಾರ್ ಹೇಳಿದ್ದಾರೆ. ಮೊದಲ ಭಾಗದಲ್ಲಿ ಉಳಿದಿರುವ ಹಲವು ಪ್ರಶ್ನೆಗಳಿಗೆ 'ಭಾಗ 2'ರಲ್ಲಿ ಉತ್ತರ ಸಿಗಲಿದೆ. ಎಲ್ಲಕ್ಕಿಂತ ಭಾವನಾತ್ಮಕ ದೃಶ್ಯಗಳು ಪ್ರತಿಯೊಬ್ಬ ನೋಡುಗರನ್ನು ರಂಜಿಸಲಿದೆ ಎಂದು ತಂಡ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆಯ ಹಾಡುಗಳು ಸದ್ಯ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿವೆ. ರಶ್ಮಿಕಾ ನಾಯಕಿಯಾಗಿ ನಟಿಸಿದ್ದರೆ. ಫಹಾದ್ ಫಾಜಿಲ್, ಸುನೀಲ್, ಅನಸೂಯಾ, ಜಗದೀಶ್ ಪ್ರತಾಪ್ ಮತ್ತು ಧನುಂಜಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು 500 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಪುಷ್ಪ 2: ದಿ ರೂಲ್ ಡಿಸೆಂಬರ್ 6 ರಂದು ಪ್ಯಾನ್ ಇಂಡಿಯಾದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ.