18ರಂದು ನೂತನ ಪೋಪ್ ಅಧಿಕಾರಕ್ಕೆ

5-681e4577d5e41
Published on

ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ಉತ್ತರಾಧಿಕಾರಿಯಾಗಿ ಅಮೆರಿಕದ ಕಾರ್ಡಿನಲ್ ರಾಬರ್ಟ್ ಪ್ರವೋಸ್ಟ್ ಅವರು ಆಯ್ಕೆಯಾಗಿದಾರೆ. ರೋಮನ್ ಕ್ಯಾಥೋಲಿಕ್​ರ 267 ನೇ ಪೋಪ್ ಆಗಿರುವ ಪ್ರವೋಸ್ಟ್ ಮೇ 18 ರಂದು ಇವರು ಅಧಿಕಾರ ಸ್ವೀಕರಿಸಲಿದ್ದಾರೆ. ಮೂಲತಃ ಅಮೆರಿಕದ ಚಿಕಾಗೋ ನಗರದವರಾದ 69 ವರ್ಷದ ಕಾರ್ಡಿನಲ್ ರಾಬರ್ಟ್ ಪ್ರವೋಸ್ಟ್ ಅವರು ಪೋಪ್ ಲಿಯೋ ಗಿಐ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಪ್ರವೋಸ್ಟ್ ಅವರನ್ನು ತಮ್ಮ ಉತ್ತರಾಧಿಕಾರಿಯಂತೆ ಬಿಂಬಿಸಿದ್ದರು. 2014 ರಲ್ಲಿ ಪೆರುವಿನಲ್ಲಿ ಸಂಕೀರ್ಣವಾದ ಡೆಯೋಸಿಸನ್ ಪರಿಸ್ಥಿತಿಯನ್ನು ನಿರ್ವಹಿಸಲು ಪ್ರವೋಸ್ಟ್ ಅವರನ್ನು ನಿಯೋಜಿಸಿದ್ದರು. 2015 ರಲ್ಲಿ ಇವರು ಪೆರುವಿನ ಪೌರತ್ವವನ್ನು ಪಡೆದುಕೊಂಡಿದ್ದರು. ಆ ಬಳಿಕ 2023 ರಲ್ಲಿ ಕ್ಯಾಥೋಲಿಕ್ ಚರ್ಚ್​ಗಳಲ್ಲಿ ಪ್ರಮುಖ ಕೆಲಸವಾದ ಪ್ರಪಂಚದಾದ್ಯಂತದ ಬಿಷಪ್​ಗಳ ನಾಮ ನಿರ್ದೇಶನವನ್ನು ಪರಿಶೀಲಿಸುವ ಕಚೇರಿಯ ಮುಖ್ಯಸ್ಥರಾಗಿ ನೇಮಿಸಿದರು. ಜನವರಿಯಲ್ಲಿ ಅವರನ್ನು ಹಿರಿಯ ಕಾರ್ಡಿನಲ್ ಆಗಿ ನೇಮಿಸಲಾಗಿತ್ತು. ಈ ಮೂಲಕ ಪ್ರವೋಸ್ಟ್ ಅವರು ಕಾರ್ಡಿನಲ್​ಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net