ಇನ್ನು ಹೊಸ ಪ್ಯಾಕೆಟ್‌ನಲ್ಲಿ ನಂದಿನಿ ತುಪ್ಪ

KMF Nandini
Published on

ಬೆಂಗಳೂರು:

ತುಪ್ಪದ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಕೆಎಂಎ್, ಗ್ರಾಹಕರಿಗೆ ಗುಣಮಟ್ಟ ಖಾತ್ರಿಪಡಿಸುವ ಉದ್ದೇಶದಿಂದ ಹ್ಯಾಲೋ ಮಾರ್ಕ್ ಸಹಿತ ಹೊಸ ಡಿಸೈನ್ ಪ್ಯಾಕೆಟ್‌ನ್ನು ಪರಿಚಯಿಸಿದೆ.

500 ಎಂಎಲ್ (ಅರ್ಧ ಲೀಟರ್) ಮತ್ತು 1 ಲೀಟರ್ ಪ್ಯಾಕೆಟ್‌ನ್ನು ನವೀಕರಿಸಿ ಬಿಡುಗಡೆ ಮಾಡಲಾಗಿದ್ದು, ಮಾರುಕಟ್ಟೆಯಲ್ಲಿ ನಾಳೆಯಿಂದಲೇ ಲಭ್ಯವಿದೆ.

ಹ್ಯಾಲೋ ಮಾರ್ಕ್ ಸಹಿತ ಹೊಸ ಡಿಸೈನ್ ಪ್ಯಾಕೆಟ್‌ನಲ್ಲಿ ತುಪ್ಪ ಲಭ್ಯವಿರುವುದರಿಂದ ಗ್ರಾಹಕರು ಸ್ಥಳದಲ್ಲಿಯೇ ಕ್ಯೂಆರ್ ಕೋಡ್ ಮೂಲಕ ಅದರ ಪೂರ್ಣ ಮಾಹಿತಿ ಪಡೆದುಕೊಳ್ಳಲು ಸಾಧ್ಯವಿದೆ.

ನಂದಿನಿ ಬ್ರಾಂಡ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಕೆಲ ಪ್ರಕರಣಗಳು ವರದಿಯಾಗಿತ್ತು. ನಂದಿನಿ ಪ್ಯಾಕೆಟ್‌ನಲ್ಲಿ ಕಳಪೆ ತುಪ್ಪವನ್ನು ಮಾರಾಟ ಮಾಡುವುದನ್ನು ದಂಧೆಯಾಗಿ ಮಾಡಿಕೊಂಡಿದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು.

ಹ್ಯಾಲೋ ಮಾರ್ಕ್ ಸಹಿತ ಹೊಸ ಡಿಸೈನ್ ಪ್ಯಾಕೆಟ್‌ನಲ್ಲಿ ತುಪ್ಪ ನೀಡುವುದರಿಂದ ಇನ್ನು ಮುಂದೆ ಈ ರೀತಿಯ ದುರ್ಬಳಕೆ ಮಾಡಿಕೊಳ್ಳಲು ಯಾವುದೇ ಅವಕಾಶವಿರುವುದಿಲ್ಲ ಎಂದು ಕೆಎಂಎ್ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಮುಂದೆ ಹೊಸ ಪ್ಯಾಕೆಟ್‌ನಲ್ಲಿ ತುಪ್ಪ ಮಾರುಕಟ್ಟೆಗೆ ಬರಲಿದೆ. ಈಗಾಗಲೇ ಮಾರುಕಟ್ಟೆಗೆ ಬಂದಿರುವ ಹಳೆಯ ಪ್ಯಾಕೆಟ್ ತುಪ್ಪವೂ ಲಭ್ಯವಿದೆ. ಹಳೆ ಪ್ಯಾಕೆಟ್ ಎಂಟತ್ತು ದಿನಗಳಲ್ಲಿ ಮುಗಿಯಬಹುದು ಎಂದು ಕೆಎಂಎ್ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net