

ಸಾಗರ: ಕ್ಷ-ಕಿರಣ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಹೊಸಹೊಸ ಆವಿಷ್ಕಾರಗಳು ಆಗುತ್ತಿವೆ. ಹೊಸದಾಗಿ ಈ ಕ್ಷೇತ್ರಕ್ಕೆ ಬರುವವರಿಗೆ ಇದರ ಅರಿವು ಅಗತ್ಯ ಎಂದು ಹೊನ್ನಾವರ ರಾಂಜ್ಟನ್ ಪ್ಯಾರಾ ಮೆಡಿಕಲ್ ಸೈನ್ಸ್ ಸಂಸ್ಥೆ ಮುಖ್ಯಸ್ಥ ಟಿ.ಸುರೇಶ್ ಹೇಳಿದರು.
ಸಾಗರದ ಶೃಂಗೇರಿ ಶಂಕರಮಠದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಸರ್ಕಾರಿ ರೇಡಿಯಾಲಜಿ ಇಮೇಜಿಂಗ್ ಅಸೋಶಿಯೇಷನ್, ರಾಂಟ್ಜನ್ ಸಂಸ್ಥೆ, ಶಿವಮೊಗ್ಗ ಜಿಲ್ಲಾ ರೇಡಿಯಾಲಜಿ ಅಸೋಶಿಯೇಷನ್‌ನಿಂದ ಏರ್ಪಡಿಸಿದ್ದ ರೇಡಿಯೇಷನ್ ಪ್ರೊಟೆಕ್ಷನ್ ಇನ್ ಡಯಗ್ನಾಸ್ಟಿಕ್ ರೇಡಿಯಾಲಜಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರೇಡಿಯಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವೈಜ್ಞಾನಿಕ ತರಬೇತಿ ಅಗತ್ಯ. ತಂತ್ರಜ್ಞಾನ, ವಿಜ್ಞಾನ ಕ್ಷೇತ್ರಗಳು ವೇಗವಾಗಿ ಬೆಳೆಯುತ್ತಿವೆ. ಆದರೆ ಗುಣಮಟ್ಟದ ಸುಧಾರಣೆಗೆ ಇನ್ನೂ ಒತ್ತು ನೀಡಬೇಕು. ಬಿ.ಎಸ್ಸಿ, ಎಂ.ಎಸ್ಸಿ, ಪದವಿ ಪಡೆದವರಿಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಇರುತ್ತದೆ ಎಂದರು.
ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಹಿರಿಯ ಸಲಹೆಗಾರ ಮಾ.ಸ.ನಂಜುಂಡಸ್ವಾಮಿ ಮಾತನಾಡಿ, ನಾವು ಕೆಲಸ ಮಾಡುವ ಕ್ಷೇತ್ರದ ಬಗ್ಗೆ ನಮಗೆ ಆಸಕ್ತಿ ಇರಬೇಕು. ರೇಡಿಯಾಲಜಿ ಕ್ಷೇತ್ರಕ್ಕೆ ವೈದ್ಯರ ಕೊಡುಗೆ ಅಪಾರ ಎಂದು ಹೇಳಿದರು.
ಡಿಎಚ್‌ಒ ಡಾ. ನಟರಾಜ್, ಶಿವಮೊಗ್ಗ ಜಿಲ್ಲಾ ಸಂಘದ ಶಂಕರಯ್ಯ ಸಿ. ಗುರುವಿನ್, ಅಶ್ವಿನಿಕುಮಾರ್, ಸಿದ್ದಾಚಾರಿ, ಸತೀಶ್‌ಕುಮಾರ್, ಸಚಿನ್, ಆರ್.ಎಸ್.ಪಾಟೀಲ್, ರಾಜಶೇಖರ್ ಇಳಿಗೇರ್, ಅನ್ನಪೂರ್ಣಾ ಸಿದ್ದೇಶ್, ರವಿ, ಅಶೋಕ್ ಇತರರಿದ್ದರು.