ಪ್ರಿಯಾಂಕಾ ಚೋಪ್ರಾ ಮನೆಗೆ ಹೊಸ ಅತಿಥಿಯ ಆಗಮನ... ನೀವು ಅಂದುಕೊಳ್ಳುತ್ತಿರುವುದಲ್ಲ...

priyanka chopra
Published on

ನವದೆಹಲಿ: ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ ದಂಪತಿ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಅರೆ, ನೀವು ಅಂದುಕೊಳ್ಳುತ್ತಿರುವಂತೆ ಅವರು ಗರ್ಭಿಣಿಯೂ ಆಗಿಲ್ಲ ಅಥವಾ ಮಕ್ಕಳನ್ನು ದತ್ತು ಪಡೆದುಕೊಳ್ಳುತ್ತಿಲ್ಲ. ಬದಲಿಗೆ ಅವರ ಮನೆಗೆ ಹೊಸ ನಾಯಿ ಮರಿಯೊಂದು ಬಂದಿದ್ದು, ತಮ್ಮ ಕುಟುಂಬಕ್ಕೆ ಅದು ಸೇರ್ಪಡೆಗೊಂಡಿದೆ ಎಂದು ಹೇಳಿ ಸಂತಸದಿಂದ ಪ್ರಿಯಾಂಕಾ ಚೋಪ್ರಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಶ್ವಾನಪ್ರಿಯೆ ಪ್ರಿಯಾಂಕಾ ಅವರ ಬಳಿ ಈಗಾಗಲೆ ಜೀನೋ ಮತ್ತು ಡಯಾನಾ ಎಂಬ ಎರಡು ನಾಯಿಗಳಿವೆ. ಇದೀಗ ಆ ಎರಡರ ನಡುವೆ ಪಾಂಡಾ ಎಂಬ ಹೆಸರಿನ ಮತ್ತೊಂದು ನಾಯಿಯನ್ನು ತಂದಿದ್ದಾರೆ. ಪಾಂಡಾ ಬಗ್ಗೆ ಹೇಳಿಕೊಂಡಿರುವ ಅವರು ಇದು ಜರ್ಮನ್​ ಶೆಪರ್ಡ್​ ಮತ್ತು ಆಸ್ಟ್ರೇಲಿಯನ್​ ಹಸ್ಕಿಯ ಮಿಶ್ರತಳಿಯಾಗಿದೆ. ಇದೊಂದು ರೆಸ್ಕ್ಯೂ ಡಾಗ್​ ಆಗಿದೆ ಎಂದು ತಿಳಿಸಿದ್ದಾರೆ.

ಸೂಕ್ಷ್ಮಗಣ್ಣಿನ ನೆಟ್ಟಿಗರು ಪ್ರಿಯಾಂಕಾ ಚೋಪ್ರಾ ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಹೊಸ ಫ್ಯಾಮಿಲಿ ಫೋಟೋದಲ್ಲಿ ಲೋಪವೊಂದನ್ನು ಪತ್ತೆ ಮಾಡಿದ್ದಾರೆ. ಅದು ಡಯಾನಾಕ್ಕೆ ಸಂಬಂಧಿಸಿದ್ದಾಗಿದೆ.

ಇದನ್ನು ಒಪ್ಪಿಕೊಂಡಿರುವ ಪ್ರಿಯಾಂಕಾ ಚೋಪ್ರಾ, ನಮ್ಮ ಫ್ಯಾಮಿಲಿ ಫೋಟೋ ತೆಗೆಯುವಾಗ ಡಯಾನಾ ಇರಲಿಲ್ಲ. ಹಾಗಾಗಿ ಆಕೆಯನ್ನು ಬಿಡಬಾರದು ಎಂಬ ಕಾರಣಕ್ಕೆ ಆಕೆಯ ಪೋಟೋವನ್ನು ಫೋಟೋಶಾಪ್​ ಮಾಡಿ, ಫ್ಯಾಮಿಲಿ ಪೋಟೋಕ್ಕೆ ಜೋಡಣೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net