

ರಾಣೆಬೆನ್ನೂರ: ನಗರದ ಎಪಿಎಂಸಿ ವರ್ತಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮೇ 15ರಂದು ಬೆಳಗ್ಗೆ 10.30ಕ್ಕೆ ನಗರದ ರೇಲ್ವೆ ಸ್ಟೇಷನ್ ರಸ್ತೆ, ವರ್ತಕರ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ.
ಚನ್ನಬಸವರಾಜ ಕುರವತ್ತಿ (ಅಧ್ಯಕ್ಷ), ಉಮಾಪತಿ ಹೊನ್ನಾಳಿ (ಉಪಾಧ್ಯಕ್ಷ), ಮಾಲತೇಶ ಚಳಗೇರಿ (ಗೌರವ ಕಾರ್ಯದಶಿರ್) ಹಾಗೂ ನಿರ್ದೇಶಕರಾಗಿ ವಿರುಪಾಕ್ಷಪ್ಪ ಅಂಗಡಿ, ಶಂಕರಗೌಡ ಸಣ್ಣಗೌಡರ, ರಾಜು ಶಿವಲಿಂಗಪ್ಪನವರ, ಆರ್. ರಮೇಶಬಾಬು, ನಿಂಗನಗೌಡ ಪಾಟೀಲ, ರಾಜು ಗೋಂದಕರ, ಅಶೋಕ ನರಸಗೊಂಡರ, ಮಹಂತೇಶ ಕುರುಗೋಡಪ್ಪನವರ, ಚನ್ನಬಸಪ್ಪ ಬದಾಮಿ, ಮಂಜುನಾಥ ಬೂದಿಹಾಳ, ಚಂದ್ರು ಸಣ್ಣಗೌಡರ, ಕಿರಣ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದು ಇವರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸಂದ ಪ್ರಕಟಣೆ ತಿಳಿಸಿದೆ.