

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಇಳಿಮುಖವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಕಳೆದ ಐದಾರು ದಿನಗಳಿಂದ ನಿತ್ಯವೂ 9 ಸಾವಿರಕ್ಕೂ ಅಧಿಕ ಹೊಸ ಸೋಂಕಿತರು ಪತ್ತೆಯಾಗುತ್ತಲೇ ಇದ್ದಾರೆ.
ಭಾನುವಾರ ರಾಜ್ಯದಲ್ಲಿ 9,894 ಹೊಸ ಕೇಸ್ಗಳು ವರದಿಯಾಗಿದ್ದು, ಒಟ್ಟಾರೆ ಕರೊನಾ ಸೋಂಕಿತರ ಸಂಖ್ಯೆ 4,59,445ಕ್ಕೆ ಏರಿಕೆಯಾಗಿದೆ. ಕೋವಿಡ್ನಿಂದ 104 ಜನರು ಮೃತಪಟ್ಟಿದ್ದು, ಒಟ್ಟು ಕೋವಿಡ್ ಸಾವಿನ ಸಂಖ್ಯೆ 7,265ಕ್ಕೆ ತಲುಪಿದೆ.
ಕೊಂಚ ಸಮಾಧಾನದ ಸಂಗತಿ ಎಂದರೆ, ಕೋವಿಡ್ನಿಂದ ಗುಣವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ಭಾನುವಾರ 8,402 ಜನರು ಚೇತರಿಕೆ ಕಂಡಿದ್ದಾರೆ. ಒಟ್ಟು ಈವರೆಗೆ ಗುಣವಾದವರ ಸಂಖ್ಯೆ 3,52,958 ಆಗಿದೆ.
ಗಂಭೀರಾವಸ್ಥೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆಯೂ ಏರಿಕೆಯಾಗಿ 807ಕ್ಕೆ ತಲುಪಿದೆ. ಸಕ್ರಿಯ ಕೇಸ್ಗಳ ಸಂಖ್ಯೆ 99,203ಕ್ಕೆ ಏರಿಕೆಯಾಗಿದೆ.
ಇನ್ನು, ರಾಜಧಾನಿಯಲ್ಲಿ 3,479 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 1,70,662ಕ್ಕೆ ತಲುಪಿದೆ. ಭಾನುವಾರ 3,270 ಜನರು ಚೇತರಿಕೆ ಕಂಡಿದ್ದು, ಈವರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರು 1,27,132 ಮಂದಿ. ಭಾನುವಾರದವರೆಗೆ ಸಕ್ರಿಯ ಕೇಸ್ಗಳ ಸಂಖ್ಯೆ 41,093 ಆಗಿದೆ.
ರಾಜಧಾನಿಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ 45 ಆಗಿದ್ದು, ಈವರೆಗೆ ಒಟ್ಟು 2,436 ಮಂದಿ ಸಾವಿಗೀಡಾಗಿದ್ದಾರೆ. ಮೈಸೂರಿನಲ್ಲಿ 15, ಬಳ್ಳಾರಿಯಲ್ಲಿ 8 ಜನ ಕೋವಿಡ್ಗೆ ಬಲಿಯಾಗಿದ್ದಾರೆ.