

ನವದೆಹಲಿ: ಹೊಸ ಜಾತಿಯ ಜಿರಳೆಗಳು ಪತ್ತೆಯಾಗಿದ್ದು, ಅವುಗಳಿಗೆ ಇಟ್ಟಿರುವ ಹೆಸರೇ ಈಗ ಅವುಗಳತ್ತ ಗಮನ ಸೆಳೆಯುವಂತೆ ಮಾಡಿದೆ. ಸಿಂಗಾಪುರದಲ್ಲಿ ಪತ್ತೆಯಾಗಿರುವ ಈ ಹೊಸ ಪ್ರಭೇದದ ಜಿರಳೆಗಳಿಗೆ ಫೆರೊಮೊಸಾ ಎಂಬ ಹೆಸರು ಇಡಲಾಗಿದೆ.
ಸಿಂಗಾಪುರದಲ್ಲಿ ಅನ್ವೇಷಣೆ ಮಾಡಲಾಗಿರುವ ಈ ಜಿರಳೆಗಳು ಪೊಕಿಮೋನ್ ಏಳನೇ ಜನರೇಷನ್ನ ವಿಡಿಯೋ ಗೇಮ್ಸ್ನಲ್ಲಿನ ಫೆರೊಮೊಸಾವನ್ನೇ ಹೋಲುತ್ತಿರುವುದರಿಂದ ಈ ಹೊಸ ಥರದ ಜಿರಳೆಗಳಿಗೆ ಅದೇ ಹೆಸರನ್ನು ಇಡಲಾಗಿದೆ.
ಲೀ ಕಾಂಗ್ ಚಿಯಾನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಪ್ರಕಾರ ನಾಕ್ಟಿಕೊಲಾ ಫೆರೊಮೊಸಾ ಎಂದು ಹೆಸರಿಸಲಾಗಿರುವ ಈ ಜಿರಳರೆ ನಾಕ್ಟಿಕೊಲಿಡೇ ಕುಟುಂಬಕ್ಕೆ ಸೇರಿದ್ದು, ಸದ್ಯಕ್ಕೆ ಇದರ 32 ಪ್ರಭೇದಗಳಷ್ಟೇ ಉಳಿದಿದೆ. ಇದರ ಬಾಹ್ಯರೂಪ ಈಗಾಗಲೇ ಗುರುತಿಸಲಾಗಿರುವ ಪ್ರಭೇದಕ್ಕೆ ಹೋಲುವಂತಿದ್ದರೂ, ಇದನ್ನು ಛೇದನ ಮಾಡಿ ನೋಡಿದಾಗ ಅಂಗರಚನೆಗಳು ಬೇರೆ ಪ್ರಭೇದಗಳಿಂದ ಭಿನ್ನವಾಗಿವೆ ಎನ್ನಲಾಗಿದೆ.