

ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ಕರೊನಾಗೆ ಕಡಿವಾಣವೇ ಇಲ್ಲದಂತಾಗಿದೆ. ದಿನವೂ 5 ಸಾವಿರಕ್ಕಿಂತಲೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇಂದು ಕೂಡ ಅದೇ ಟ್ರೆಂಡ್ ಮುಂದುವರಿದಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 5,536 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1,07,001ಕ್ಕೆ ತಲುಪಿದೆ. ಇದರಲ್ಲಿ ಸಕ್ರಿಯ ಪ್ರಕರಣಗಳು 64,434 ಆಗಿದೆ.
ಚೇತರಿಸಿಕೊಂಡವರ ಸಂಖ್ಯೆ ಕೂಡ ಹೆಚ್ಚಾಗಿರುವುದು ಕೊಂಚ ಸಮಾಧಾನದ ವಿಷಯ. ಇಂದು ಒಟ್ಟು 2,819 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಗುಣವಾದವರ ಒಟ್ಟು ಸಂಖ್ಯೆ 40, 404ಕ್ಕೆ ತಲುಪಿದೆ.
ಇನ್ನು, ಕೋವಿಡ್ನಿಂದ ಸಾವಿಗೀಡಾದವ ಸಂಖ್ಯೆ 2 ಸಾವಿರ ದಾಟಿದ್ದು, ಒಟ್ಟು 2,055 ಜನರು ಮೃತಪಟ್ಟಿದ್ದಾರೆ. ಮತ್ತೊಮ್ಮೆ ಒಂದೇ ದಿನ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿಯೂ 1898 ಹೊಸ ಕರೊನಾ ಪ್ರಕರಣಗಳು ವರದಿಯಾಗಿವೆ. ಒಟ್ಟು ಕೇಸ್ಗಳು 48,821. ಚೇತರಿಸಿಕೊಂಡವರು 572 ಹಾಗೂ ಮೃತಪಟ್ಟವರ ಸಂಖ್ಯೆ 40 ಆಗಿದ್ದು, ಈವರೆಗಿನ ಒಟ್ಟು ಸಾವು 957 ಕ್ಕೆ ಏರಿದೆ.
ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಇಂದಿನ ಕರೊನಾ ಪೀಡಿತರ ಸಂಖ್ಯೆ ನೂರು ದಾಟಿದೆ.
ಜಿಲ್ಲೆಗಳ ಕೋವಿಡ್ ಅಂಕಿ-ಅಂಶಗಳು