ಮನೆ ಬಾಗಿಲಲ್ಲಿ ನವಜಾತ ಶಿಶು ಎಸೆದು ಪರಾರಿ! ಮಗು ಸಾವಿನ ಸುದ್ದಿಗೆ ಕಂಬನಿ ಮಿಡಿದ ಸ್ಥಳೀಯರು

Untitled design - 2024-06-22T084139.877
Published on

ವಿಜಯಪುರ: ಆಗ ತಾನೇ ಜನಿಸಿದ ಗಂಡು ಶಿಶುವನ್ನು ಮನೆಯ ಬಾಗಿಲಲ್ಲಿ ಎಸೆದು ಪರಾರಿಯಾದ ಹೃದಯವಿದ್ರಾವಕ ಘಟನೆ ವಿಜಯಪುರದ ಚಾಲುಕ್ಯನಗರ ಪಶ್ಚಿಮದಲ್ಲಿ ವರದಿಯಾಗಿದೆ. ನವಜಾತ ಶಿಶುವನ್ನು ರಾಮಕೃಷ್ಣ ಆಸ್ಪತ್ರೆಯ ಹಿಂಬದಿಯ ಬಿ.ಜಿ. ಪೊಲೀಸ್ ಪಾಟೀಲ ಎಂಬುವವರ ಮನೆಯ ಹೊಸ್ತಿಲಲ್ಲಿ ಎಸೆದು ಕಿಡಿಗೇಡಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಆಸ್ಪತ್ರೆಯಲ್ಲಿ ಹೆರಿಗೆಯಾಗಿರುವ ಕ್ಲಿಪ್ ಜತೆಯಲ್ಲಿ ಮಗು ಎಸೆದು ಪರಾರಿಯಾಗಿರುವುದು ತಿಳಿದುಬಂದಿದೆ. ಮಗುವಿನ ದೇಹದ ಮೇಲೆ ಕಪ್ಪು ಕಪ್ಪು ಕಲೆಗಳು ಕಂಡುಬಂದಿದ್ದು, ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಶಿಶು ಮೃತಪಟ್ಟಿರುವುದು ಧೃಡವಾಗಿದೆ. ಮನೆಯಲ್ಲಿ ಬಾಡಿಗೆ ಇರುವ ವೇಳೆ ವಿದ್ಯಾರ್ಥಿನಿಯರು ಬಾಗಿಲು ತೆಗೆದಾಗ ಈ ಘಟನೆ ಬೆಳಕಿಗೆ ಬಂದಿದೆ.

ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net