

ನವದೆಹಲಿ: ಭಾರತದ ಪುರಾತತ್ತ್ವ ಸವೇಕ್ಷಣಾಲಯ (ಎಎಸ್ಐ) ಅಥವಾ ಬೇರಾವುದೇ ಸರ್ಕಾರಿ ಸಂಸ್ಥೆ ಗುರುತಿಸಿದ 100 ವರ್ಷಕ್ಕಿಂತ ಹಳೆಯ ಮಸೀದಿಗಳ ಸರ್ವೆಕ್ಷಣೆ ನಡೆಸುವುದಕ್ಕೆ ನಿರ್ದೇಶನ ನೀಡಬೇಕು ಎಂದು ವಕೀಲರಾದ ಶುಭಂ ಅವಸ್ಥಿ ಮತ್ತು ಸರ್ಪ¤ ಮಿಶ್ರಾ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಮಧ್ಯಕಾಲೀನ ಯುಗದಲ್ಲಿ ಮುಸ್ಲಿಂ ಆಕ್ರಮಣಕಾರರು ಅನೇಕ ಹಿಂದೂ, ಜೈನ, ಸಿಖ್ ಮತ್ತು ಬೌದ್ಧ ದೇವಾಲಯಗಳನ್ನು ಅಪವಿತ್ರಗೊಳಿಸಿದ್ದಾರೆ. ಅಷ್ಟೇ ಅಲ್ಲ, ಅವುಗಳನ್ನು ಕೆಡವಿ ಮಸೀದಿಗಳನ್ನು ನಿರ್ವಿುಸಿರುವುದಕ್ಕೆ ಪುರಾವೆಗಳಿವೆ. ದೇಶಾದ್ಯಂತ ಸರ್ಕಾರವೇ ಗುರುತಿಸಿರುವ ನೂರು ವರ್ಷಕ್ಕಿಂತಲೂ ಹಳೆಯ ಮಸೀದಿಗಳ ಸವೇಕ್ಷಣೆ ನಡೆಸಬೇಕು. ಸದ್ಯ ಎಲ್ಲ ಪುರಾತನ ಮಸೀದಿಗಳಲ್ಲಿ ಕೆರೆ ಅಥವಾ ಬಾವಿಗಳಲ್ಲಿ ‘ವಾಜು’ ಮಾಡುವುದನ್ನು ನಿಲ್ಲಿಸುವುದಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಅರ್ಜಿದಾರರ ವಾದ: ಐತಿಹಾಸಿಕ ಸತ್ಯಗಳನ್ನು ಪ್ರತಿಪಾದಿಸಿರುವ ಅರ್ಜಿ ಯಲ್ಲಿ, ಮುಸ್ಲಿಂ ದಾಳಿಕೋರರು ದೇವಾಲಯಗಳನ್ನು ಧ್ವಂಸಗೊಳಿಸಿ ಮಸೀದಿಗಳನ್ನು ನಿರ್ವಿುಸಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಹೇಳಲಾಗಿದೆ. ಹೀಗಿರುವಾಗ ಸರ್ಕಾರ ಗೌಪ್ಯ ಸಮೀಕ್ಷೆ ನಡೆಸಿದರೆ ಹಲವು ಅಧಿಕೃತ ಪುರಾವೆಗಳು ಬಹಿರಂಗವಾದೀತು. ಹಿಂದೂಗಳು, ಸಿಖ್ಖರು, ಜೈನರು ಅಥವಾ ಬೌದ್ಧರಿಗೆ ಧಾರ್ವಿುಕ ಸ್ಥಳಗಳಿವೆಯೇ ಎಂದೂ ಕಂಡುಹಿಡಿಯಬಹುದು. ಇದಕ್ಕಾಗಿ ಸವೇಕ್ಷಣೆ ನಡೆಸಬೇಕು. ಸಮೀಕ್ಷೆಯಲ್ಲಿ ಯಾವುದೇ ಪುರಾವೆಗಳು ಕಂಡುಬಂದಲ್ಲಿ ಕೋಮು ದ್ವೇಷ ಮತ್ತು ಧಾರ್ವಿುಕ ಭಾವನೆಗಳಿಗೆ ಧಕ್ಕೆಯಾಗದಂತೆ ಈ ಸಮೀಕ್ಷೆಗಳನ್ನು ಗೌಪ್ಯವಾಗಿಡಬೇಕೆಂಬ ಬೇಡಿಕೆಯೂ ಇತ್ತು. ಗೌಪ್ಯ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ವಾಜು ಮಾಡಲು ಬೇರೆ ಕಡೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರಾಚೀನ ಅವಶೇಷ ಉಳಿಸಿ: ಸಮೀಕ್ಷೆಯ ವೇಳೆ ಮಸೀದಿಯ ಒಳಗೆ ಅಥವಾ ಬಾವಿಯಿಂದ ಯಾವುದೇ ಧರ್ಮದ ಅವಶೇಷಗಳು ಅಥವಾ ಕೆಲವು ವಸ್ತುಗಳು ಕಂಡುಬಂದರೆ ಅವುಗಳನ್ನು ಸಂರಕ್ಷಿಸಬೇಕು. ಈ ಪ್ರಾಚೀನ ಮಸೀದಿಗಳಲ್ಲಿ ಅನೇಕ ದೇವತೆಗಳ ಅವಶೇಷಗಳಿರುವುದು ಪತ್ತೆಯಾಗಿವೆ. ಅವು ಇತರ ಧರ್ಮಗಳಾಗಿರುತ್ತದೆ. ಪರಸ್ಪರ ಸಹಕಾರ ಮತ್ತು ಸೌಹಾರ್ದತೆಗಾಗಿ, ಈ ಮಸೀದಿಗಳಲ್ಲಿ ಇರುವ ಸ್ಮಾರಕಗಳನ್ನು ಗೌರವಿಸಬೇಕು ಮತ್ತು ಅವುಗಳನ್ನು ಹಿಂದಿರುಗಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪೂಜಾಸ್ಥಳ, ಹೊಸ ದಾವೆ: ಪೂಜಾಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ 1991ರ ವಿಭಾಗಗಳ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಹೊಸ ದಾವೆ ದಾಖಲಾಗಿದೆ. ಮಥುರಾ ಮೂಲದ ದೇವಕಿನಂದನ ಠಾಕೂರ್ ಈ ದಾವೆ ಸಲ್ಲಿಸಿದ್ದು, ಕಾಯ್ದೆಯ ಸೆಕ್ಷನ್ 2,3,4ರ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ.
ಮಸೀದಿ ಆವರಣ ಯಥಾಸ್ಥಿತಿಗೆ ಮನವಿ: ಮಥುರಾದ ಕೃಷ್ಣ ಜನ್ಮಭೂಮಿ- ಶಾಹಿ ಈದ್ಗಾ ವಿವಾದ ಪ್ರಕರಣಕ್ಕೆ ಸಂಬಂಧಿಸಿ ಯಥಾ ಸ್ಥಿತಿ ಕಾಪಾಡಬೇಕು ಎಂದು ಸಿವಿಲ್ ಜಡ್ಜ್ (ಸೀನಿಯರ್ ಡಿವಿಷನ್) ಕೋರ್ಟ್ಗೆ ಮೂರು ಅರ್ಜಿಗಳು ಸಲ್ಲಿಸಲ್ಪಟ್ಟಿವೆ. ಬೇಸಿಗೆ ರಜೆ ಮುಗಿದ ನಂತರ ಜುಲೈ 1ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಆಗ ಈ ಅರ್ಜಿಗಳು ವಿಚಾರಣೆಗೆ ಬರಲಿವೆ ಎಂದು ಕೋರ್ಟ್ ಮೂಲಗಳು ತಿಳಿಸಿವೆ.
ಆಗ್ರಾ ಮಸೀದಿ ಕೆಳಗೆ ಹಿಂದು ದೇವರ ವಿಗ್ರಹ: ಆಗ್ರಾ ಕೋಟೆಯ ಮಸೀದಿಯ ಕೆಳಗೆ ಹಿಂದು ದೇವರ ವಿಗ್ರಹ ಇದೆ. ಈ ಮಸೀದಿಯ ಸವೇಕ್ಷಣೆ ನಡೆಸಿ ದೇವರನ್ನು ಹೊರತರಬೇಕು ಎಂದು ಆಗ್ರಹಿಸಿ ಮಥುರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಮಥುರಾ ನ್ಯಾಯಾಲಯವು ವಕೀಲರ ಅರ್ಜಿಯನ್ನು ಹಿಂದಿರುಗಿಸಿದ್ದು, ಪ್ರತಿವಾದಿಗೆ ನೋಟಿಸ್ ನೀಡುವಂತೆ ಫಿರ್ಯಾದುದಾರರಿಗೆ ತಿಳಿಸಿದೆ. ಆಗ್ರಾ ಕೋಟೆಯ ದಿವಾನ್-ಎ-ಖಾಸ್ ಸಮೀಪದ ಮಸೀದಿಯ ಮೆಟ್ಟಿಲುಗಳ ಕೆಳಗೆ ‘ಠಾಕೂರ್ ಕೇಶವ್ ದೇವ್’ ದೇವರ ವಿಗ್ರಹವನ್ನು ಹೂಳಲಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿತ್ತು.