

ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಗರ್ಭಿಣಿ ಎಂಬ ರೂಮರ್ಸ್ ಹರಿದಾಡುತ್ತಿದೆ. ಕೆಲವು ಫೋಟೋಗಳೂ ಸೋಶಿಯಲ್ ಮೀಡಿಯಾ ತುಂಬಾ ಹರಿದಾಡುತ್ತಿವೆ.
ಜಾಮ್ನಗರದಲ್ಲಿ ನಡೆದ ಅನಂತ್-ರಾಧಿಕಾ ಪ್ರಿ ವೆಡ್ಡಿಂಗ್ ಕಾರ್ಯಕ್ರಮದ ನಂತರ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಫೋಟೋಗೆ ಪೋಸ್ ನೀಡಿದರು. ಈ ವೇಳೆ ಕತ್ರಿನಾ ತನ್ನ ಹೊಟ್ಟೆಯನ್ನು ದುಪಟ್ಟಾದಿಂದ ಮರೆಮಾಚಿರುವುದನ್ನು ನೋಡಬಹುದಾಗಿದೆ.
ಕತ್ರಿನಾ ಕೈಫ್ ಗರ್ಭಿಣಿ ಎಂಬ ರೂಮರ್ಸ್ ಹರಿದಾಡುತ್ತಿವೆ. ನಟಿ ದೀಪಿಕಾ ಪಡುಕೋಣೆ ಬಳಿಕ ಕತ್ರಿನಾ ಕೈಫ್ ಸಿಹಿ ಸುದ್ದಿ ನೀಡಲಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕತ್ರಿನಾ ಪ್ರೆಗ್ನೆಂಟ್ ಅಂತ ಕೇಳ್ತಿದ್ದಾರೆ. ಆದ್ರೆ ಈ ಬಗ್ಗೆ ದಂಪತಿ ಹೇಳಿಕೊಂಡಿಲ್ಲ.
ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್ 2021 ರಲ್ಲಿ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಫೋರ್ಟ್ ಬರ್ವಾಡದ ಸಿಕ್ಸ್ ಸೆನ್ಸ್ ರೆಸಾರ್ಟ್ನಲ್ಲಿ ಸಾಂಪ್ರದಾಯಿಕ ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಮದುವೆಯಾಗಿ ಮೂರು ವರ್ಷಗಳಾಗಿದೆ.