

ಬಿಹಾರ: ರಾಯಲ್ ವೆಡ್ಡಿಂಗ್ ಶೈಲಿಯಲ್ಲಿ ವರ, ವಧುವನ್ನು ಕರೆತರಲು ಹೆಲಿಕಾಪ್ಟರ್‌ನಲ್ಲಿ ಹೋಗಿದ್ದಾನೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಲ್ಲಿದೆ.
ಬಿಹಾರದ ಉದ್ಯಮಿ ಅರುಣ್ ಕುಮಾರ್ ಗುಪ್ತಾ ಅವರ ಮೂರನೇ ಮಗ ಪ್ರಕಾಶ್ ಗುಪ್ತಾ, ಅಂಜಲಿ ಗುಪ್ತಾ ಅವರನ್ನು ವಿವಾಹವಾಗಿದ್ದಾರೆ. ಮದುವೆ ಸಮಾರಂಭವನ್ನು ಹತ್ತಾರು ವರ್ಷಗಳ ಕಾಲ ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಭಾವಿಸಿದ್ದಾರೆ. ಇದಕ್ಕಾಗಿ, ಅವರು ವಧುವನ್ನು ಕರೆದುಕೊಂಡು ಬರಲು ಹೆಲಿಕಾಪ್ಟರ್‌ನಲ್ಲಿ ತೆರಳಿದ್ದಾರೆ.
ಮದುವೆಗೆ 6 ಗಂಟೆಗಳ ಕಾಲ ಲಕ್ನೋದಲ್ಲಿ ಹೆಲಿಕಾಪ್ಟರ್ ಬುಕ್ ಮಾಡಲಾಗಿತ್ತು. ಇದಕ್ಕಾಗಿ ಒಟ್ಟು ಎಂಟೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಮದುವೆಯ ನಂತರ ಪ್ರಕಾಶ್ ತನ್ನ ವಧು ಅಂಜಲಿ ಗುಪ್ತಾ ಅವರೊಂದಿಗೆ ಮನೆಗೆ ಹೆಲಿಕಾಪ್ಟರ್‌ನಲ್ಲಿ ಬಂದಿದ್ದಾರೆ.
ವರನ ತಂದೆ ಅರುಣ್ ಕುಮಾರ್ ಗುಪ್ತಾ ಮಾತನಾಡಿ, ಉಮೈದ್ ಭವನದಲ್ಲಿ ವಿವಾಹ ನಡೆಯಿತು. ಆರು ಸಾವಿರ ಅತಿಥಿಗಳು ಮದುವೆಗೆ ದಾವಿಸಿದ್ದರು. ಮದುವೆಗೆ ಸುಮಾರು ಒಂದು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ.