

ಆಂಧ್ರಪ್ರದೇಶ: ಟಾಲಿವುಡ್ ನಟ ಪ್ರಭಾಸ್ ಅಭಿನಯಿಸಿದ 'ಆದಿಪುರುಷ' ಚಿತ್ರವು ಕಳೆದ ಎರಡು ತಿಂಗಳ ಹಿಂದೆ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಭಾರೀ ಹಿನ್ನಡೆಯನ್ನು ಅನುಭವಿಸಿತು. ಚಿತ್ರದ ವಿಎಫ್ಎಕ್ಸ್, ಡೈಲಾಗ್ಗಳು, ಬಜೆಟ್ ಸೇರಿದಂತೆ ಹಲವು ವಿಚಾರಗಳಿಗೆ ಸಿನಿಮಾ ವ್ಯಾಪಕ ವಿರೋಧಗಳು ಮತ್ತು ಟ್ರೋಲ್ಗಳನ್ನು ಎದುರಿಸಿತ್ತು. ಆದ್ರೆ, ಇದೀಗ ಮತ್ತೊಮ್ಮೆ ಈ ಚಿತ್ರ ಟ್ರೋಲ್ಗೆ ಗುರಿಯಾಗಿದೆ.
ಬುಧವಾರ (ಆಗಸ್ಟ್ 23) ಭಾರತದ ಇಸ್ರೋ ಸಂಸ್ಥೆಯು ಚಂದ್ರಯಾನ-3 ಮಿಷನ್ನ ವಿಕ್ರಮ್ ಲ್ಯಾಂಡಂರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿತು. ಈ ಒಂದು ಸಂಗತಿ ಜಗತ್ತಿನಾದ್ಯಂತ ಸಂಚಲನ ಮೂಡಿಸಿದ್ದು, ಪ್ರತಿಯೊಬ್ಬ ಭಾರತೀಯನಿಗೂ ಇದೊಂದು ಹೆಮ್ಮೆಯ ಕ್ಷಣವಾಗಿದೆ. ಸದ್ಯ ಈ ವಿಚಾರವನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುಖೇನ ಕೊಂಡಾಡಿದ್ದಾರೆ ಮತ್ತು ಇಸ್ರೋ ಸೈಟಿಂಸ್ಟ್ಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಮಧ್ಯೆ ಇಸ್ರೋ ಚಂದ್ರಯಾನ-3ರ ಮಿಷನ್ ಈಡೇರಿಸಲು 615 ಕೋಟಿ ರೂ. ಅನ್ನು ಬಳಕೆ ಮಾಡಿತು. ಆದ್ರೆ, ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರಕ್ಕೆ ಬರೋಬ್ಬರಿ 700 ಕೋಟಿ ರೂ. ಬಂಡವಾಳ ಹೂಡಲಾಗಿತ್ತು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಆದಿಪುರುಷ್ ಚಿತ್ರವನ್ನು ಮತ್ತೊಮ್ಮೆ ಟ್ರೋಲ್ ಮಾಡುವ ಮುಖೇನ ತರಾಟೆಗೆ ತೆಗೆದುಕೊಂಡಿದ್ದಾರೆ.
ಚಂದ್ರಯಾನ 3ರ ಮಿಷನ್ ಈಡೇರಿಸಲು ಬಳಸಿದ ಬಜೆಟ್ ಆದಿಪುರುಷ ಚಿತ್ರಕ್ಕಿಂತ ಕಡಿಮೆಯಿದೆ. ಈ ಚಿತ್ರಕ್ಕೆ ಬಳಸಿದ ಹಣವನ್ನು ನಮ್ಮ ವಿಜ್ಞಾನಿಗಳಿಗೆ ಕೊಡಬಹುದಿತ್ತು ಎಂದು ವ್ಯಾಪಕವಾಗಿ ಟೀಕಿಸಿದ್ದಾರೆ. ಹಲವರು ಚಿತ್ರದ ಫೋಟೋ ಮತ್ತು ಚಂದ್ರಯಾನ 3ರ ಬಜೆಟ್ನ ಫೋಟೋ ಜೋಡಿಸಿ ಟ್ರೋಲ್ ಮಾಡಿದ್ದಾರೆ,(ಏಜೆನ್ಸೀಸ್).