ಹರಿದ ಸೀರೆ ಉಡುತ್ತಿದ್ದ ಅಮ್ಮ, ತುತ್ತು ಅನ್ನಕ್ಕೂ ಕಷ್ಟವಿತ್ತು..ಆದರಿಂದು ಕೂತು ತಿನ್ನುವಷ್ಟು ಆಸ್ತಿಯಿದೆ..ಈ ನಟ ಯಾರೆಂದು ಗುರುತಿಸುವಿರಾ?

amir 1
Published on

ಮುಂಬೈ: ಬಾಲಿವುಡ್‌ನಲ್ಲಿ ಸೈ ಎನಿಸಿಕೊಳ್ಳುವುದು ಎಲ್ಲರಿಗೂ ಸುಲಭವಲ್ಲ. ಇಲ್ಲಿಗೆ ಬಂದಿರುವ ಸ್ಟಾರ್​​​ಗಳು ತಮ್ಮದೇ ಆದ ವಿಶಿಷ್ಟ ಕಥೆಯನ್ನು ಹೊಂದಿದ್ದಾರೆ. ಕೆಲವರು ಹಲವು ವರ್ಷಗಳಿಂದ ಕಷ್ಟಪಡುತ್ತಿದ್ದರೆ, ಇನ್ನು ಕೆಲವರ ಬಾಲಿವುಡ್ ಜರ್ನಿ ತುಂಬಾ ಸುಲಭವಾಗಿತ್ತು. ಇಂದು ನಾವು ನಿಮಗೆ ಊಟಕ್ಕೂ ಹಣವಿಲ್ಲದೆ ಪರದಾಡಿದ ಸ್ಟಾರ್ ಬಗ್ಗೆ ಹೇಳುತ್ತೇವೆ. ಆದರೆ ಇಂದು ಈ ನಟ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಹೌದು, ನಾವಿಂದು ಹೇಳುತ್ತಿರುವುದು ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಬಗ್ಗೆ. ಅಮೀರ್ ಖಾನ್ ಇಂದು ಸಿನಿಮಾಗಳಿಂದ ದೂರವಿದ್ದರೂ ಮನೆಯಲ್ಲಿ ಕುಳಿತರೂ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದಾರೆ. ಹಾಗಾದರೆ ಅಮೀರ್ ಖಾನ್ ಅವರ ನಿವ್ವಳ ಮೌಲ್ಯ ಎಷ್ಟು, ಏನು ಎಂದು ತಿಳಿಯೋಣ ಬನ್ನಿ...

ಬಡತನದಲ್ಲಿ ಕಳೆದ ಬಾಲ್ಯ
ತಮ್ಮ ಬಾಲ್ಯವು ಬಡತನದಿಂದ ಕೂಡಿತ್ತು ಎಂದು ಅಮೀರ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರ ಕುಟುಂಬವು ಹಲವು ವರ್ಷಗಳಿಂದ ಸಾಲದಲ್ಲೇ ಇತ್ತು. ಶಾಲೆಯ ಶುಲ್ಕ ಕಟ್ಟಲೂ ನಟನ ಬಳಿ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ತನ್ನ ಒಡಹುಟ್ಟಿದವರ ಪೈಕಿ ಹಿರಿಯನಾಗಿದ್ದರಿಂದ ಕುಟುಂಬದ ಜವಾಬ್ದಾರಿಯೂ ಅವರ ಮೇಲಿತ್ತು. ವರದಿಗಳ ಪ್ರಕಾರ, ಅಮೀರ್ ಖಾನ್ ಅವರ ತಂದೆ ತಾಹಿರ್ ಹುಸೇನ್ ತಮ್ಮ ಕುಟುಂಬವನ್ನು ಪೋಷಿಸಲು ಕಷ್ಟಪಟ್ಟು ಬದುಕುತ್ತಿದ್ದರು. ಉಡಲು ಹೊಸ ಬಟ್ಟೆ ಇರಲಿಲ್ಲ ಮತ್ತು ಆಹಾರ ಮತ್ತು ನೀರಿಗಾಗಿ ನಿರ್ಗತಿಕರಾಗಬೇಕಾಯಿತು.

ಬಾಲಿವುಡ್‌ ಪಯಣ ಸುಲಭವಾಗಿರಲಿಲ್ಲ
ಅಮೀರ್ ಖಾನ್ ಅವರ ತಂದೆ ತಾಹಿರ್ ಹುಸೇನ್ ಅವರು ನಿರ್ಮಾಪಕರಾಗಿದ್ದರು. ಆದ್ದರಿಂದ ನಟ ಕೂಡ ಚಲನಚಿತ್ರಗಳಲ್ಲಿ ವೃತ್ತಿಜೀವನ ಶುರು ಮಾಡುವ ಬಯಕೆಯಿಂದ ಬಾಲಿವುಡ್ ಉದ್ಯಮಕ್ಕೆ ಬಂದರು, ಆದರೆ ಅವರ ಪ್ರಯಾಣವು ಸುಲಭವಾಗಿರಲಿಲ್ಲ. ಮಿಸ್ಟರ್ ಪರ್ಫೆಕ್ಷನಿಸ್ಟ್ ತಮ್ಮದೇ ಚಿತ್ರದ ಪ್ರಚಾರಕ್ಕಾಗಿ ಬೀದಿಗಳಲ್ಲಿ ಪೋಸ್ಟರ್ ಅಂಟಿಸಬೇಕಾದ ಸಂದರ್ಭವಿತ್ತು. ಕಯಾಮತ್ ಸೇ ಕಯಾಮತ್ ತಕ್ ಚಿತ್ರದ ಮೂಲಕ ಅವರು ತಮ್ಮನ್ನು ಗುರುತಿಸಿಕೊಂಡರು. ಈ ಸಿನಿಮಾ ಬ್ಲಾಕ್ಬಸ್ಟರ್ ಆಯಿತು.

1800 ಕೋಟಿ ಮೌಲ್ಯದ ಆಸ್ತಿ
ಅಮೀರ್ ಖಾನ್ ಅವರ ಬಾಲ್ಯ ಬಹಳ ಕಷ್ಟದಿಂದ ಕೂಡಿದ್ದರೂ ಇಂದು ನಟ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಅವರ ಸಂಪತ್ತು 1800 ಕೋಟಿ ರೂ. ವರದಿಯ ಪ್ರಕಾರ, ನಟನ ಒಟ್ಟು ನಿವ್ವಳ ಮೌಲ್ಯ ಸುಮಾರು 1862 ರೂ. ಕೋಟಿ, ಇದಲ್ಲದೇ ಅವರು ಐಷಾರಾಮಿ ಮನೆಗಳ ಒಡೆಯ.

ದುಬಾರಿ ಕಾರುಗಳ ಸಂಗ್ರಹ
ಅಮೀರ್ ಖಾನ್ ಬಳಿ ರೋಲ್ಸ್ ರಾಯ್ಸ್ ನಿಂದ ಮರ್ಸಿಡಿಸ್ ಬೆಂಜ್ ವರೆಗಿನ ದುಬಾರಿ ಕಾರುಗಳ ಸಂಗ್ರಹವಿದೆ. ವರದಿಯ ಪ್ರಕಾರ, ನಟನ ಬಳಿ ಸುಮಾರು 9 ರಿಂದ 10 ಕಾರುಗಳಿವೆ, ಅದರ ಮೌಲ್ಯ 15 ರಿಂದ 18 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ. ಇದಲ್ಲದೇ ಅಮೀರ್ ಖಾನ್ ಅವರು ಪಂಚಗಣಿಯಲ್ಲಿ 7 ಕೋಟಿ ರೂಪಾಯಿ ಮೌಲ್ಯದ ಫಾರ್ಮ್ ಹೌಸ್ ಮಾಲೀಕರಾಗಿದ್ದಾರೆ. ಸಮುದ್ರಕ್ಕೆ ಮುಖ ಮಾಡಿರುವ ಅವರ ಬಂಗಲೆ ಬಾಂದ್ರಾದಲ್ಲಿದೆ, ಇದರ ಬೆಲೆ 60 ಕೋಟಿ ಎಂದು ಹೇಳಲಾಗಿದೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net