ಭಾಷೆ ಬೆಳವಣಿಗೆಗೆ ಅನುವಾದ ಮುಖ್ಯ

Published on

ಮೈಸೂರು: ಭಾಷೆ ಹಾಗೂ ಸಮಾಜದ ಬೌದ್ಧಿಕ ಬೆಳವಣಿಗೆಗೆ ಅನುವಾದ ಬಹಳ ಮುಖ್ಯ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸದಸ್ಯೆ ಪ್ರೊ.ಎನ್. ಉಷಾರಾಣಿ ಹೇಳಿದರು.

ನಗರದ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಶುಕ್ರವಾರ ರಾಜೇಂದ್ರ ಪ್ರಿಂಟರ್ಸ್ ಆ್ಯಂಡ್ ಪಬ್ಲಿಷರಸ್ ಮತ್ತು ಕನ್ನಡ ಸಾಹಿತ್ಯ ಕಲಾಕೂಟ ಆಯೋಜಿಸಿದ್ದ ಡಾ.ನೇಸರ ಕಾಡನಕುಪ್ಪೆ ಅನುವಾದಿಸಿರುವ ಗಾಡ್ ಫಾದರ್-1 ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು.

ನಗರದ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಶುಕ್ರವಾರ ಡಾ.ನೇಸರ ಕಾಡನಕುಪ್ಪೆ ಅನುವಾದಿಸಿರುವ ಗಾಡ್ ಫಾದರ್-1 ಕಾದಂಬರಿಯನ್ನು ಗಣ್ಯರು ಬಿಡುಗಡೆ ಮಾಡಿದರು. ಪ್ರೊ.ಎನ್. ಉಷಾರಾಣಿ, ಕೃಪಾಕರ್, ಸೇನಾನಿ, ಡಾ. ರಾಗೌ, ಡಾ.ನೇಸರ ಕಾಡನಕುಪ್ಪೆ, ಎಂ.ಚಂದ್ರಶೇಖರ್, ಡಿ.ಎನ್.ಲೋಕಪ್ಪ, ಕೆ.ನರಸಿಂಹಮೂರ್ತಿ ಇದ್ದರು.
ನಗರದ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಶುಕ್ರವಾರ ಡಾ.ನೇಸರ ಕಾಡನಕುಪ್ಪೆ ಅನುವಾದಿಸಿರುವ ಗಾಡ್ ಫಾದರ್-1 ಕಾದಂಬರಿಯನ್ನು ಗಣ್ಯರು ಬಿಡುಗಡೆ ಮಾಡಿದರು. ಪ್ರೊ.ಎನ್. ಉಷಾರಾಣಿ, ಕೃಪಾಕರ್, ಸೇನಾನಿ, ಡಾ. ರಾಗೌ, ಡಾ.ನೇಸರ ಕಾಡನಕುಪ್ಪೆ, ಎಂ.ಚಂದ್ರಶೇಖರ್, ಡಿ.ಎನ್.ಲೋಕಪ್ಪ, ಕೆ.ನರಸಿಂಹಮೂರ್ತಿ ಇದ್ದರು.

ಭಾಷೆ ಬೆಳವಣಿಗೆಗೂ ಅನುವಾದ ಬಹಳ ಮುಖ್ಯವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನುವಾದ ಮಾಡುವುದರಲ್ಲಿ ನಾವು ಸೋತಿದ್ದೇವೆ. ಹೆಚ್ಚು ಹೆಚ್ಚು ಸಾಹಿತ್ಯ ಕೃತಿಗಳು ಅನುವಾದ ಆಗಬೇಕು. ಪಕ್ಕದ ಮಲೆಯಾಳಂನಿಂದ ದೊಡ್ಡ ದೊಡ್ಡ ಕೃತಿಗಳನ್ನು ಅನುವಾದಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಅನುವಾದ ಸಾಹಿತ್ಯ ಸಂಬಂಧ ನಮ್ಮಲ್ಲಿರುವ ದೃಷ್ಟಿಕೋನ ಬದಲಾಗಬೇಕು. ಹೊಸ ಓದುಗರು ಸೃಷ್ಟಿ ಆಗುತ್ತಾರೆ. ಜ್ಞಾನ ಹೆಚ್ಚುತ್ತದೆ ಎಂದರು.

ದೃಷ್ಟಿಕೋನ ಬದಲಾಗಬೇಕು

ಗ್ರೀನ್ ಆಸ್ಕರ್ ಪುರಸ್ಕೃತ ಕೃಪಾಕರ್ ಮಾತನಾಡಿ, ಭಾರತ ಅನುವಾದದ ದೃಷ್ಟಿಯಲ್ಲಿ ಬಡವಾಗಿದೆ. ಕುವೆಂಪು ಕೂಡ ಹೊರಗಿನ ಸಾಹಿತ್ಯ ಏನು ಬರುತ್ತದೆ ಎಂದು ಕಾಯುತ್ತಿದ್ದರು. ಇಸ್ರೇಲ್‌ನಲ್ಲಿ 13 ಜನರಿಗೆ ನೊಬೆಲ್ ಬಂದಿದೆ. ಆದ್ದರಿಂದ ಭಾಷಾಂತರದಲ್ಲಿ ಹೆಚ್ಚು ಕೆಲಸ ಆಗಬೇಕಿದೆ. ಜ್ಞಾನ ಎಂದರೆ ಯಾವುದು ಎಂಬುದನ್ನು ತಿಳಿಯಬೇಕು ಎಂದು ಹೇಳಿದರು.

ಪೂರ್ಣಚಂದ್ರ ತೇಜಸ್ವಿ ಅವರು ಭಾಷಾಂತರ ಮಾಡಿದರೂ ಮೂಲಕೃತಿಗಿಂತ ಚೆನ್ನಾಗಿ ಬರೆಯುತ್ತಿದ್ದರು. ಅನುವಾದ ಹೆಚ್ಚಾಗದ ಹಿನ್ನೆಲೆಯಲ್ಲಿ ನಾವು ಬೌದ್ಧಿಕವಾಗಿ ಹಿಂದೆ ಇದ್ದೇವೆ ಎಂದರು.

ಸಾಹಿತಿ ಡಾ. ರಾಗೌ ಅಧ್ಯಕ್ಷತೆ ವಹಿಸಿದ್ದರು. ವನ್ಯಜೀವಿ ಛಾಯಾಗ್ರಾಹಕ ಸೇನಾನಿ, ಕೃತಿಯ ಲೇಖಕ ಡಾ.ನೇಸರ ಕಾಡನಕುಪ್ಪೆ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಪ್ರಕಾಶಕ ಡಿ.ಎನ್.ಲೋಕಪ್ಪ, ಪತ್ರಕರ್ತ ಕೆ.ನರಸಿಂಹಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net