ಎನ್‌ಇಎಸ್ ನಲ್ಲಿ ಅಮೃತ ಮಹೋತ್ಸವ ನಿಮಿತ್ತ ವಾರಾಂತ್ಯ ಕಾರ್ಯಕ್ರಮ

Nes s.n.Nagaraj
Published on

ಶಿವಮೊಗ್ಗ: ಎನ್‌ಇಎಸ್(ರಾಷ್ಟ್ರೀಯ ಶಿಕ್ಷಣ ಸಮಿತಿ)ನ ಅಮೃತ ಮಹೋತ್ಸವ ನಿಮಿತ್ತ 400 ಕಿಲೋವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಉದ್ಘಾಟನೆ, ಉಪನ್ಯಾಸ ಮಾಲಿಕೆ ಸೇರಿದಂತೆ ವಾರಾಂತ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ತಿಳಿಸಿದರು.

ಜ.23ರಂದು ಬೆಳಗ್ಗೆ 11ಕ್ಕೆ ಕುವೆಂಪು ರಂಗಮಂದಿರದಲ್ಲಿ ಉಪನ್ಯಾಸ ಮಾಲಿಕೆ 9ನೇ ಸರಣಿ ಹಮ್ಮಿಕೊಳ್ಳಲಾಗಿದೆ. ಇಸ್ರೋ ವಿಜ್ಞಾನಿ, ಪದ್ಮ ವಿಭೂಷಣ ಡಾ. ಬಿ.ಎನ್.ಸುರೇಶ್ ಅವರು ರಾಷ್ಟ್ರಕ್ಕೆ ಬಾಹ್ಯಾಕಾಶ ತಂತ್ರಜ್ಞಾನದ ಕೊಡುಗೆ: ಅಂದು, ಇಂದು ಮತ್ತು ಮುಂದು ವಿಷಯ ಕುರಿತು ಮಾತನಾಡುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಉಪನ್ಯಾಸ ಮಾಲಿಕೆಯನ್ನು ಎಸ್.ಆರ್.ನಾಗಪ್ಪ ಶೆಟ್ಟಿ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜು ಸಂಯೋಜಿಸಲಿದೆ. ಜ.30ರಂದು ಬೆಳಗ್ಗೆ 11ಕ್ಕೆ ಕಮಲಾ ನೆಹರು ಕಾಲೇಜಿನಲ್ಲಿ ರಾಜ್ಯ ಸರ್ವೋದಯ ಮಂಡಲದ ಆಶ್ರಯದಲ್ಲಿ ಸರ್ವೋದಯ ದಿನಾಚರಣೆ ಮತ್ತು ರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮೇಲುಕೋಟೆ ಜನಪದ ಸೇವಾ ಟ್ರಸ್ಟ್‌ನ ಸುಮನಸ ಕೌಲಗಿ ದಿಕ್ಸೂಚಿ ಭಾಷಣ ಮಾಡುವರು. ಸರ್ವೋದಯ ಮಂಡಳಿ ಜಿಲ್ಲಾಧ್ಯಕ್ಷ ಭಗವಂತರಾವ್ ಉಪಸ್ಥಿತರಿರುವರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ನಡೆಸಿಕೊಡುತ್ತಿರುವುದು ವಿಶೇಷ ಎಂದರು.

25ಕ್ಕೆ ಸೌರ ವಿದ್ಯುತ್ ಘಟಕದ ಉದ್ಘಾಟನೆ:

ಜ.25ರಂದು ಬೆಳಗ್ಗೆ 11ಕ್ಕೆ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿಸಿರುವ 400 ಕಿಲೋವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ. ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು ಎಂದು ಹೇಳಿದರು.

ಸಮಿತಿ ಉಪಾಧ್ಯಕ್ಷ ಸಿ.ಆರ್.ನಾಗರಾಜ್, ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕ ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ, ಸಹಾಯಕ ಕುಲಸಚಿವ ಪ್ರೊ. ಎನ್.ಕೆ.ಹರಿಯಪ್ಪ, ಪ್ರಾಚಾರ್ಯ ಡಾ. ಕೆ.ನಾಗೇಂದ್ರಪ್ರಸಾದ್, ಡಾ. ನಾಗಭೂಷಣ್, ಡಾ. ಕೆ.ಎಲ್.ಅರವಿಂದ, ಪಿಆರ್‌ಒ ಸಿ.ಎಂ.ನೃಪತುಂಗ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net