

.
ಕಾಠ್ಮಂಡು; ನೇಪಾಳದ ಲೋಕಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸುವಲ್ಲಿ ವಿಫಲವಾಗಿದ್ದಕ್ಕೆ ಕೆಪಿ ಓಲಿ ನೇತೃತ್ವದ ನೇಪಾಳ ಕಮ್ಯುನಿಸ್ಟ್ ಸರ್ಕಾರ ಪತನವಾಗಿದೆ. ಪ್ರಧಾನಿ ಕೆಪಿ ಓಲಿ ಅವರು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ಬಿದ್ಯಾದೇವಿ ಭಂಡಾರಿ ಅವರಿಗೆ ಸಲ್ಲಿಸಿದ್ದಾರೆ.
ನೇಪಾಳ ವಿರೋಧ ಪಕ್ಷಗಳು ಓಲಿ ಸರ್ಕಾರ ದೇಶದಲ್ಲಿ ಕರೊನಾ ನಿರ್ವಹಣೆಯಲ್ಲಿ ವಿಫಲವಾಗಿದೆ. ಆಡಳಿತ ಭ್ರಷ್ಟಾಚಾರದಿಂದ ಕೂಡಿದೆ. ಈ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸಲು ಸೂಚಿಸಬೇಕು ಎಂದು ರಾಷ್ಟಪತಿಗೆ ಮನವಿ ಸಲ್ಲಿಸಿದ್ದವು. ಆದರೆ ಸೋಮವಾರ ಪಾರ್ಲಿಮೆಂಟ್ ನಲ್ಲಿ ವಿಶ್ವಾಸಮತ ಸಾಬೀತಿನಲ್ಲಿ ಓಲಿ ವಿಫಲರಾದರು.
271 ಸದಸ್ಯ ಬಲದ ಸದನದಲ್ಲಿ 232 ಜನ ಹಾಜರಿದ್ದರು. ಇದರಲ್ಲಿ 124 ಮತಗಳು ಓಲಿ ಸರ್ಕಾರದ ವಿರುದ್ಧ ಚಲಾವಣೆಗೊಂಡವು. 93 ಮತಗಳು ಪರವಾಗಿ ಚಲಾವಣೆಗೊಂಡವು. 28 ಆಡಳಿತಾರೂಢ ಪಕ್ಷದ ಸದಸ್ಯರು ಬಂಡೆದ್ದು ವಿರೋಧ ಪಕ್ಷ ಸೇರಿದ್ದಾರೆ.
2015 ರಲ್ಲಿ ನೇಪಾಳ ಸಂವಿಧಾನ ಅಸ್ತಿತ್ವಕ್ಕೆ ಬಂದಿತ್ತು. ಆ ಮೂಲಕ ಪ್ರಜಾಪ್ರಭುತ್ವದ ಸರ್ಕಾರಕ್ಕೆ ಅವಕಾಶ ಲಭಿಸಿತ್ತು. ಇದೇ ಮೊದಲ ಬಾರಿಗೆ ಸರ್ಕಾರ ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲವಾಗಿದೆ.