ಭ್ರಷ್ಟಾಚಾರ ತೊಲಗಿಸಿ, ಸೋಷಿಯಾ ಮೀಡಿಯಾ ಅಲ್ಲ! ನೇಪಾಳ ಪ್ರಧಾನಿ, ರಾಷ್ಟ್ರಪತಿ ನಿವಾಸಕ್ಕೆ ಆಕ್ರೋಶದ 'ಕಿಚ್ಚು' | Nepal

ವಿಜಯವಾಣಿ (54)
Published on

Nepal GenZ: ಸಾಮಾಜಿಕ ಜಾಲತಾಣದ ಮೇಲೆ ನಿಷೇಧ ಹೇರಿದ ನೇಪಾಳ ಸರ್ಕಾರದ ವಿರುದ್ಧ ಸಾವಿರಾರು ಸಂಖ್ಯೆಯಲ್ಲಿ ಭುಗಿಲೆದ್ದಿರುವ ಯುವಜನತೆ, ನಿನ್ನೆಯಿಂದ ದೇಶದಲ್ಲಿ ತೀವ್ರ, ಬೃಹತ್​ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಬ್ಯಾನ್ ನಿರ್ಧಾರವನ್ನು ಖಂಡಿಸುತ್ತಿರುವ ಯುವಕರ ಪ್ರತಿಭಟನೆ ಸದ್ಯ ಹಿಂಸಾತ್ಮಕಕ್ಕೆ ತಿರುಗಿದೆ. ಇಲ್ಲಿಯವರೆಗೆ ಘಟನೆಯಲ್ಲಿ 19 ಮಂದಿ ಮೃತಪಟ್ಟಿದ್ದು, ಹಲವರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮಧ್ಯೆ ದೇಶದ ಪ್ರಧಾನಿ ಮತ್ತು ರಾಷ್ಟ್ರಪತಿ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ, ಆಕ್ರೋಶ ಹೊರಹಾಕಿದ್ದಾರೆ.

'ಎನ್​ಡಿಟಿವಿ' ವರದಿ ಪ್ರಕಾರ, ಪ್ರಸ್ತುತ ನೇಪಾಳದಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳನ್ನು ತಡೆಯುವಲ್ಲಿ ವಿಫಲರಾಗಿರುವ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಸರ್ಕಾರ, ಯುವಜನತೆಯ ಆಕ್ರೋಶವನ್ನು ಎದುರಿಸಲು ಬೆದರಿದ್ದಾರೆ. ಕಂಡ ಕಂಡಲೆಲ್ಲ ಬೆಂಕಿ ಹಚ್ಚುವುದು ಮತ್ತು ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿರುವ ಯುವಜನತೆ, ಪಿಎಂ ಒಲಿ ಮತ್ತು ರಾಷ್ಟ್ರಪತಿಗಳ ನಿವಾಸಕ್ಕೆ ಬೆಂಕಿ ಹಚ್ಚಿ, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಪಿಎಂ ಓಲಿ ಪಲಾಯನಕ್ಕೆ ಸಜ್ಜು

ಮತ್ತೊಂದೆಡೆ, ದೇಶದಲ್ಲಿ ವಿಪರೀತ ಕಿಚ್ಚು ವ್ಯಕ್ತವಾಗುತ್ತಿರುವ ಹಿನ್ನೆಲೆ, ನೇಪಾಳ ಪ್ರಧಾನಿ ಸ್ಥಾನಕ್ಕೆ ಓಲಿ ಈ ಕೂಡಲೇ ರಾಜೀನಾಮೆ ಕೊಡಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ. ಇದಕ್ಕೆ ಪುಷ್ಠಿ ನೀಡುವಂತೆ ಈಗಾಗಲೇ ಅನೇಕ ಸಚಿವರು ರಾಜೀನಾಮೆ ಘೋಷಿಸಿ, ಸರ್ಕಾರದಿಂದ ದೂರ ಸರಿದಿದ್ದಾರೆ. ಇದು ಬಲವಂತವಾಗಿ, ಬೇರೆ ದಾರಿಯಿಲ್ಲದೆ ಓಲಿ ರಾಜೀನಾಮೆ ಕೊಡುವುದರ ಜೊತೆಗೆ ದೇಶ ತೊರೆಯುವಂತೆ ಒತ್ತಾಯಿಸಿದೆ.

ಪ್ರತಿಭಟನಾಕಾರರ 'ಕಿಚ್ಚು'

"ಭ್ರಷ್ಟಾಚಾರವನ್ನು ತೊಲಗಿಸಿ, ಸೋಷಿಯಾ ಮೀಡಿಯಾ ಅಲ್ಲ" ಎಂಬ ಹಲವು ವಿರೋಧ ವ್ಯಕ್ತಪಡಿಸುವ ಫಲಕಗಳನ್ನು ಪ್ರತಿಭಟನಾಕಾರರು ಕಠ್ಮಂಡುವಿನ ಹಲವೆಡೆ ಪ್ರದರ್ಶಿಸಿದ್ದಾರೆ. ಘಟನೆಯ ಹಲವು ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net