ನೆಲ್ಲೀರ, ನಾಯಕಂಡ ತಂಡ ಮುಂದಿನ ಹಂತಕ್ಕೆ

17 gkp 01.
Published on

ಗೋಣಿಕೊಪ್ಪಲು : ಚೆಕ್ಕೇರ ಒಕ್ಕ, ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಹುದಿಕೇರಿ ಜನತಾ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಚೆಕ್ಕೇರ ಕ್ರಿಕೆಟ್ ನಮ್ಮೆಯಲ್ಲಿ 7 ತಂಡಗಳು ಮುನ್ನಡೆ ಪಡೆದುಕೊಂಡಿವೆ.

ಚಂಗುಲಂಡ ಮತ್ತು ನೆಲ್ಲೀರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ನೆಲ್ಲೀರ ತಂಡ ನಿಗದಿತ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಚಂಗುಲಂಡ ತಂಡ 6 ವಿಕೆಟ್ ಕಳೆದುಕೊಂಡು 44 ರನ್ ಗಳಿಸಲಷ್ಟೇ ಶಕ್ತವಾಯ್ತು. ನಾಯಕಂಡ ಮತ್ತು ಅರಮಣಮಾಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಅರಮಣಮಾಡ ತಂಡ ನಿಗದಿತ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿತು. ನಾಯಕಂಡ ತಂಡ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು.

ಚೀರಂಡ ಮತ್ತು ಮೂಕಳೇರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೂಕಳೇರ ತಂಡ ನಿಗದಿತ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 87 ಟನ್ ಗಳಿಸಿತು. ಚೀರಂಡ ತಂಡ 3 ವಿಕೆಟ್ ಕಳೆದುಕೊಂಡು 64 ರನ್ ಗಳಿಸಲಷ್ಟೇ ಶಕ್ತವಾಯ್ತು. ಬಲ್ಲಡಿಚಂಡ ಮತ್ತು ಚೀಯಂಡೀರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಚೀಯಂಡಿರ ತಂಡ ನಿಗದಿತ 6 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿತು. ಬಲ್ಲಡಿಚಂಡ ತಂಡ 7 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿತು.

ಕನ್ನಿಗಂಡ ಮತ್ತು ಪೊನ್ನಿಮಾಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಪೊನ್ನಿಮಾಡ ತಂಡ ನಿಗದಿತ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟವಿಲ್ಲದೆ 48 ರನ್ ಗಳಿಸಿತು. ಕನ್ನಿಗಂಡ ತಂಡ 1 ವಿಕೆಟ್ ನಷ್ಟ ಗುರಿ ತಲುಪಿತು. ಪಾರುವಂಡ ಮತ್ತು ಮುಕ್ಕಾಟಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮುಕ್ಕಾಟಿರ ತಂಡ ನಿಗದಿತ 6 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿತು. ಪಾರುವಂಡ ತಂಡ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಮುಕ್ಕಾಟಿರ ಮಾದಾಪುರ ಮತ್ತು ಜಮ್ಮಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಜಮ್ಮಡ ತಂಡ ನಿಗದಿತ 6 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿತು. ಮುಕ್ಕಾಟಿರ ತಂಡ 6 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net