ರಾಷ್ಟ್ರೀಯ ಕೈಮಗ್ಗ ದಿನಾಚರಣೆ ವೈಜ್ಞಾನಿಕ ನೇಕಾರಿಕೆಗೆ ಸರ್ಕಾರದ ನೆರವು: ಸಚಿವ ಶಿವಾನಂದ ಪಾಟೀಲ್

Shivanand Patil 2
Published on

ಬೆಂಗಳೂರು:
ನೇಕಾರರು ವೈಜ್ಞಾನಿಕ ನೇಕಾರಿಕೆಗೆ ಮುಂದಾದರೆ ಇಲಾಖೆಯಿಂದ ಅಗತ್ಯ ನೆರವು ನೀಡಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಬ್ಯಾಂಕ್ವೆಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೈಮಗ್ಗಗಳ ಸಂಖ್ಯೆ ದಿನೇದಿನೆ ಕಡಿಮೆಯಾಗುತ್ತಿದ್ದು, ವೈಜ್ಞಾನಿಕ ನೇಕಾರಿಕೆ ಅಳವಡಿಸಿಕೊಳ್ಳದಿದ್ದರೆ ಸುಧಾರಣೆ ಕಷ್ಟ ಎಂದರು.

ಬಾಂಗ್ಲಾ ಬೆಳವಣಿಗೆಯಿಂದ ಬೇಡಿಕೆ
ಬಾಂಗ್ಲಾದ ಬೆಳವಣಿಗೆಗಳು ಅಲ್ಲಿನ ಜವಳಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರಿವೆ. ಇದು ಜವಳಿ ಉತ್ಪನ್ನ ರಫ್ತು ಕ್ಷೇತ್ರದಲ್ಲಿ ಭಾರತಕ್ಕೆ ಉತ್ತಮ ಅವಕಾಶಗಳನ್ನು ಸೃಷ್ಟಿಸಿದೆ. ಈ ಅವಕಾಶ ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಲಿದೆ ಎಂದರು.

1000 ಎಕರೆ ಜವಳಿ ಪಾರ್ಕ್
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿ ಜಿಲ್ಲೆಯಲ್ಲಿ 1,000 ಎಕರೆ ಪ್ರದೇಶದಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಸುಮಾರು 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಮೆಗಾ ಜವಳಿ ಪಾರ್ಕ್ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net