

ಬೆಂಗಳೂರು : ಸ್ಕೈಲ್ಯಾಂಡ್ ಇನ್ಫ್ರಾ ವತಿಯಿಂದ ಉತ್ತರ ಬೆಂಗಳೂರಿನ ದೊಡ್ಡಬಳ್ಳಾಪುರದ ಸ್ಯಾಟಲೈಟ್ ಟೌನ್ ರಿಂಗ್ರೋಡ್ ಬಳಿ 100 ಎಕರೆ ಜಾಗದಲ್ಲಿ ‘ನೈಬರ್ ಹುಡ್’ ಹೆಸರಿನಲ್ಲಿ ನೂತನ ಲೇಔಟ್ ಅಭಿವೃದ್ಧಿಪಡಿಸುತ್ತಿದೆ. ಪ್ರತಿ ಚದರಡಿಗೆ 999 ರೂ.ನಿಗದಿಪಡಿಸಿದೆ. 30*40 ವಿಸ್ತೀರ್ಣ ಮತ್ತು ಅದರ ಮೇಲ್ಪಟ್ಟ ವಿಸ್ತೀರ್ಣದ ನಿವೇಶನಗಳು ಲಭ್ಯವಿದೆ. ಸಾಲ, ಬಡ್ಡಿ ಇಲ್ಲದೆ ಕಂತಿನ ರೂಪದಲ್ಲಿ ಸೈಟ್ ಖರೀದಿಸಬಹುದು.
ಮಧ್ಯಮ ವರ್ಗದ ಗ್ರಾಹಕರ ಮನಗಂಡು ಈ ಲೇಔಟ್ ನಿರ್ವಿುಸಲಾಗುತ್ತಿದೆ. ಲೇಔಟ್ ಸುತ್ತಮುತ್ತ ಆರೋ ಇಂಟರ್ನ್ಯಾಷನಲ್ ಶಾಲೆ, ಅಮ್ನಿಟಿ ವಿಶ್ವವಿದ್ಯಾಲಯ ಸೇರಿ ಇತರ ಕಾಲೇಜುಗಳಿವೆ. ಮಳೆನೀರು ಕೊಯ್ಲು ವ್ಯವಸ್ಥೆ, ವಿದ್ಯುತ್, ಬೀದಿದೀಪ, ರಸ್ತೆ, ನೀರಿನ ಸಂಪರ್ಕ, ಬಾಕ್ಸ್ ಡ್ರೖೆನ್, ಟ್ರೀ ಲೈನ್ ರಸ್ತೆ ಹಾಗೂ ದಿನದ 24 ಗಂಟೆ ಭದ್ರತೆ ಸೇರಿ ಇತರ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಈ ಭಾಗದ ಸುತ್ತಮುತ್ತ ಐಟಿ ಸಂಸ್ಥೆಗಳು, ಕಾಪೋರೇಟ್ ಉದ್ಯಮ ಸಂಸ್ಥೆಗಳಿವೆ. ಲೇಔಟ್ ಪಕ್ಕದಲ್ಲೇ ಕ್ವೀನ್ಸ್ ಸಿಟಿ ಇದೆ. 12 ಸಾವಿರ ಎಕರೆಯಲ್ಲಿ ಬೆಂಗಳೂರು ಮಾಹಿತಿ ತಂತ್ರಜ್ಞಾನ ತಾಂತ್ರಿಕ ಬಂಡವಾಳ ಪ್ರದೇಶ ಅಭಿವೃದ್ಧಿಯಾಗುತ್ತಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಪ್ರಾಜೆಕ್ಟ್ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಉದ್ದೇಶಿತ ರಾಮಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಿರ್ವಣವಾಗಲಿದೆ.ಗಾಂಧಿ ಕೃಷಿ ವಿಶ್ವ ಕೇಂದ್ರ(ಜಿಕೆವಿಕೆ)ದಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಪ್ರಾಧ್ಯಾಪಕರು, ಕೃಷಿ ವಿಶ್ವ ಗೃಹ ನಿರ್ಮಾಣ ಸಹಕಾರ ಸಂಘವನ್ನು ಹುಟ್ಟು ಹಾಕಿದ್ದಾರೆ. ಸ್ಕೈಲ್ಯಾಂಡ್ ಇನ್ಪಾ›ದಿಂದ ಇವರಿಗೆ ಲೇಔಟ್ ನಿರ್ವಿುಸಲಾಗುತ್ತಿದೆ.
ಬೆಂಗಳೂರು ನಗರದಲ್ಲಿ ಪ್ರಾಪರ್ಟಿ ಖರೀದಿಸುವ ಯೋಜನೆ ಇರುವವರಿಗೆ ದೊಡ್ಡಬಳ್ಳಾಪುರ ಉತ್ತಮ ಆಯ್ಕೆಯಾಗಿದೆ. ಉತ್ತರ ಬೆಂಗಳೂರಿನಲ್ಲಿ ಉತ್ತಮ ವಸತಿ ಯೋಜನೆಗಳಿವೆ. ಸ್ಯಾಟಲೈಟ್ ರಿಂಗ್ ರೋಡ್ (ಎಸ್ಟಿಆರ್ಆರ್) ಸೇರಿ ಮುಂತಾದ ಯೋಜನೆಗಳು ದೊಡ್ಡಬಳ್ಳಾಪುರವನ್ನು ರಿಯಲ್ ಎಸ್ಟೇಟ್ ಹೂಡಿಕೆದಾರರ ನೆಚ್ಚಿನ ಆಯ್ಕೆಯಾಗಿದೆ. ಬೆಂಗಳೂರು ಹೊರಗಡೆ ಇರುವುದರಿಂದ ಈ ಸ್ಥಳ ಹಸಿರು ಹೊದಿಕೆಯಿಂದ ಕೂಡಿದೆ. ಸಾಕಷ್ಟು ಮೂಲಸೌಕರ್ಯಗಳಿವೆ. ‘ನೈಬರ್ಹುಡ್’ನಲ್ಲಿ ನಿವೇಶನ ಖರೀದಿಸಿದರೆ ಕೆಲ ವರ್ಷಗಳಲ್ಲಿ ಹೆಚ್ಚಿನ ಆದಾಯವೂ ಸಿಗಲಿದೆ ಎಂದು ಕೃಷಿ ವಿಶ್ವ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಪವನ್ ಹೇಳುತ್ತಾರೆ.