

ನವದೆಹಲಿ: ನಿರ್ಲಕ್ಷ್ಯ ಹಾಗೂ ಅತಿ ವೇಗದ ಚಾಲನೆಯೇ ಪ್ರಾಣಹಾನಿಗೆ ಕಾರಣ ಎಂಬುದು ಅಂಕಿ-ಅಂಶಗಳ ವಿಶ್ಲೇಷಣೆಯಿಂದ ದೃಢಪಟ್ಟಿದೆ. ನಿರ್ಲಕ್ಷ್ಯ ಹಾಗೂ ಅತಿ ವೇಗದ ಚಾಲನೆಯಿಂದಾದ ರಸ್ತೆ ಅಪಘಾತಗಳಲ್ಲಿ ಶೇಕಡ 83ರಷ್ಟು ಪ್ರಾಣಹಾನಿ ಆಗುತ್ತದೆ.ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದಲ್ಲಿ (ಎನ್ಸಿಆರ್ಬಿ) 2014ರಿಂದ ಲಭ್ಯವಿರುವ ಮಾಹಿತಿಗಳನ್ನು ವಿಶ್ಲೇಷಿಸಿದಾಗ ಈ ಅಂಶ ಹೊರಬಿದ್ದಿದೆ.
ಪ್ರಾಣ ಹಾನಿ ಸಂಭವಿಸಿದ ಬಹುತೇಕ ಅಪಘಾತ ಪ್ರಕರಣಗಳ ಪ್ರಥಮ ಮಾಹಿತಿ ವರದಿಯನ್ನು (ಎಫ್ಐಆರ್) ಪೊಲೀಸರು ವೇಗದ ಹಾಗೂ ಅಪಾಯಕಾರಿ ಚಾಲನಾ ವಿಭಾಗಗಳ ಅಡಿಯಲ್ಲೇ ದಾಖಲಿಸುತ್ತಾರೆ. ಇಂಥ ಅಪರಾಧಗಳಿಗೆ ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ಬೇರಾವುದೇ ನಿಯಮ ಇಲ್ಲದಿರುವುದರಿಂದ ಪೊಲೀಸರು ಹೀಗೆ ಮಾಡುತ್ತಾರೆ. ವೇಗ ಹಾಗೂ ನಿರ್ಲಕ್ಷ್ಯ ಚಾಲನೆಯಿಂದ ಸಂಭವಿಸುವ ಅಪಘಾತಗಳಿಂದಾಗುವ ಸಾವಿನ ಸಂಖ್ಯೆಯನ್ನು ಮೊದಲಿಗೆ 2014ರಲ್ಲಿ ಕ್ರೋಡೀಕರಿಸಲಾಗಿತ್ತು. ಆ ವರ್ಷ ಅದು ಶೇಕಡ 89.4 ಆಗಿತ್ತು. ಅದುವೇ ಅತಿ ಹೆಚ್ಚಿನ ಪ್ರಮಾಣದ್ದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಅಕ್ರಮ ಸಾಲ ಪ್ರಕರಣ: ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಪತಿ ದೀಪಕ್ ಕೊಚ್ಚಾರ್ ಬಂಧನ
ಎಲ್ಲ ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ ಪೊಲೀಸರು ಐಪಿಸಿಯ ಸೆಕ್ಷನ್ 279 (ನಿರ್ಲಕ್ಷ್ಯ ಚಾಲನೆ) ಮತ್ತು 304ಎ (ಸಾವಿಗೆ ಕಾರಣವಾದ ನಿರ್ಲಕ್ಷ್ಯ ಚಾಲನೆ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸುತ್ತಾರೆ. ಐಪಿಸಿ ಪ್ರಕಾರ, ಯಾವುದೇ ಮೊಕದ್ದಮೆಯನ್ನಾದರೂ ಮನುಷ್ಯರ ವಿರುದ್ಧ ದಾಖಲಿಸಬಹುದಾಗಿದೆ. ರಸ್ತೆ, ವಾಹನ ಅಥವಾ ಇತರ ಯಾವುದೇ ವಸ್ತುವಿನ ವಿರುದ್ಧ ಕೇಸ್ ದಾಖಲಿಸುವಂತಿಲ್ಲ. ಹೀಗಾಗಿಯೇ ಪೊಲೀಸ್ ದತ್ತಾಂಶಗಳು ಅವಘಡಗಳಿಗೆ ನಿಜವಾದ ಕಾರಣವನ್ನು ಸೂಚಿಸುವುದಿಲ್ಲ ಎಂಬುದು ಪಂಜಾಬ್ ಸರ್ಕಾರದ ಸಂಚಾರ ಸಲಹೆಗಾರ ನವದೀಪ್ ಅಸಿಜಾರ ಅಭಿಪ್ರಾಯ.
ದೇಶದಲ್ಲಿ ಪ್ರತಿ ಗಂಟೆಗೆ ಓರ್ವ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಯುವಪೀಳಿ ಭವಿಷ್ಯದ ಕುರಿತು ಆತಂಕ ಮನೆ ಮಾಡಿದೆ. 1995ರ ಜ.1 ರಿಂದ 2019ರ ಡಿ.31ರ ನಡುವೆ ದೇಶದಲ್ಲಿ 1.7 ಲಕ್ಷ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರಲ್ಲಿ ನಾನಾ ಕಾರಣಕ್ಕೆ 10,335 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗ(ಎನ್ಸಿಆರ್ಬಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ. 2019ರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಶೇ.7.5 ಹೆಚ್ಚಳವಾಗಿದೆ. ಮಹಾರಾಷ್ಟ್ರದಲ್ಲಿ 1,487 ಮಂದಿ, ಮಧ್ಯಪ್ರದೇಶದಲ್ಲಿ 927, ತಮಿಳುನಾಡಿನಲ್ಲಿ 914, ಕರ್ನಾಟಕದಲ್ಲಿ 673 ಮತ್ತು ಉತ್ತರ ಪ್ರದೇಶದಲ್ಲಿ 603 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್ಸಿಆರ್ಬಿ ವರದಿಯಲ್ಲಿ ಬಹಿರಂಗವಾಗಿದೆ. ವಿದ್ಯಾರ್ಥಿಗಳ ಆತ್ಮಹತ್ಯೆಗೆ ಮಾದಕ ದ್ರವ್ಯ ಸೇವನೆ, ಮಾನಸಿಕ ಒತ್ತಡ, ಶಿಕ್ಷಣದಲ್ಲಿ ವೈಪಲ್ಯ, ಪ್ರೇಮ ವೈಪಲ್ಯ ಸೇರಿದಂತೆ ಹಲವು ಕಾರಣ ಇರುವುದಾಗಿ ಮಾನಸಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: VIDEO: ಆಸೀಸ್ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್ ತಂಡದ ಸಂಭ್ರಮ ಹೇಗಿತ್ತು ಗೊತ್ತಾ.?
ರಸ್ತೆಗಳಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ವ್ಯಾಪಕ ಎನ್ನುವುದು ವಾಸ್ತವ ಸಂಗತಿ. ವಿದ್ಯುನ್ಮಾನ ನಿಗಾ ವ್ಯವಸ್ಥೆಯಿಂದಷ್ಟೆ ಇದರ ಮೇಲೆ ಕಡಿವಾಣ ಹಾಕಬಹುದಾಗಿದೆ. | ನವದೀಪ್ ಅಸಿಜಾ,ಪಂಜಾಬ್ ಸರ್ಕಾರದ ಸಂಚಾರ ಸಲಹೆಗಾರ