

ಶಿವಮೊಗ್ಗ: ಶಾಸಕ ಹರತಾಳು ಹಾಲಪ್ಪ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇತ್ತೀಚೆಗಷ್ಟೇ ಕರೊನಾದಿಂದ ಚೇತರಿಸಿಕೊಂಡಿದ್ದ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಪ್ಪನವರಿಗೆ ಇದೀಗ ಹೊಟ್ಟೆಯಲ್ಲಿ ಹುಣ್ಣು (ಅಲ್ಸರ್) ಆಗಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಅಡ್ಮಿಟ್ ಮಾಡಲಾಗಿದೆ. ಸಾಗರದಿಂದ ಬೆಂಗಳೂರಿನವರೆಗೆ ಕಾರಿನಲ್ಲಿಯೇ ಕರೆದುಕೊಂಡು ಬರಲಾಗಿದೆ ಎನ್ನಲಾಗಿದೆ.