ಕದ್ರಿಮಿದ್ರಿ ಗ್ರಾಮದಲ್ಲಿ ಜಾಗ ಮಂಜೂರು ಮಾಡಲು ನಿರ್ಲಕ್ಷೃ

26ckm2- kadrimdri press meet
Published on

ಚಿಕ್ಕಮಗಳೂರು: ತಾಲೂಕಿನ ಕದ್ರಿಮಿದ್ರಿ ಗ್ರಾಮದಲ್ಲಿ ನಿವೇಶನ ರಹಿತ, ವಸತಿ ರಹಿತರಿಗೆ ಜಾಗ ಮಂಜೂರು ಮಾಡಲು ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ಗ್ರಾಪಂ ಮಾಜಿ ಸದಸ್ಯ ಜಗನ್ನಾಥ್ ಆರೋಪಿಸಿದರು.
ಕದ್ರಿಮಿದ್ರಿ ಗ್ರಾಮ ಮುಕ್ತಿಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುತ್ತದೆ. ಹಿಂದಿನ ಗ್ರಾಮ ಸಭೆಗಳಲ್ಲಿ, ಗ್ರಾಪಂ ಸಭೆಗಳಲ್ಲಿ ನಿವೇಶನ ಹಂಚಿಕೆಗೆ ನಿರ್ಣಯ ಕೈಗೊಂಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ನಿವೇಶನಗಳ ಹಂಚಿಕೆಗೆ ಜಮೀನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತ, ಜಿಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಸ್ಪಂದನೆ ಸಿಕ್ಕಿಲ್ಲ. ಇದರಿಂದಾಗಿ ಗ್ರಾಮಸ್ಥರ ಮುಂದೆ ಅಸಹಾಯಕತೆ ತೋರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಗ್ರಾಮದ ಸಮೀಪ ಖಾಸಗಿ ಬಡಾವಣೆ ನಿರ್ಮಾಣವಾಗುತ್ತಿದ್ದು ಸರ್ಕಾರಿ ಜಾಗವನ್ನು ಸುಮಾರು 6 ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಕೆಲಸ ನಿಲ್ಲಿಸುತ್ತಾರೆ. ಅವರು ಅಲ್ಲಿಂದ ಹೊರಡುತ್ತಿದ್ದಂತೆ ಮತ್ತೆ ಕೆಲಸ ಶುರು ಮಾಡುತ್ತಾರೆ. ಜಿಲ್ಲಾಧಿಕಾರಿ ಒತ್ತುವರಿ ಜಾಗ ತೆರವುಗೊಳಿಸಿ ನಿವೇಶನಗಳ ಹಂಚಿಕೆಗೆ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಯೋಗೀಶ್, ಶಂಕರ್, ಶ್ರೀನಾಥ್, ಸಾಧಿಕ್, ಫಯಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net