

ಕೋವಿಡ್-19 ಸೋಂಕು ವ್ಯಾಪಿಸಿರುವ ಹಿನ್ನೆಲೆಯಲ್ಲಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಭಾರತದ 247 ದಶಲಕ್ಷ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಿದೆ ಎಂದು ಯುನಿಸೆಫ್ನ ಇತ್ತೀಚಿನ ವರದಿ ತಿಳಿಸಿದೆ.
ಶಿಶುವಿಹಾರಗಳಿಗೆ ಹೋಗುತ್ತಿರುವ 28 ದಶಲಕ್ಷ ಮಕ್ಕಳ ಭವಿಷ್ಯದ ಮೇಲೂ ದುಷ್ಪರಿಣಾಮವುಂಟಾಗಿದೆ. ಕೋವಿಡ್ ಬರá-ವ ಮೊದಲೇ ಆರು ದಶಲಕ್ಷ ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದರು. ರೇಡಿಯೊ, ಟಿವಿ ಚಾನಲ್, ಮೊಬೈಲ್ ಆಪ್, ವೆಬ್ ಪೊರ್ಟಲ್ಗಳಂಥ ಮಾಧ್ಯಮಗಳ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಂಡ ಕೇಂದ್ರ-ರಾಜ್ಯ ಸರ್ಕಾರಗಳ ಯತ್ನವನ್ನು ವರದಿ ಶ್ಲಾಘನೆ ವ್ಯಕ್ತಪಡಿಸಿದೆ. ಅದರ ಪ್ರಕಾರ ಕೋವಿಡ್ನಿಂದ ದಕ್ಷಿಣ ಏಷ್ಯದ 600 ದಶಲಕ್ಷ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ.