ದಿನ ಒಬ್ಬೊಬ್ಬರ ಜತೆ ಮಜಾ ಮಾಡುತ್ತಿಯಾ, ಇಷ್ಟು ದಪ್ಪ ಇದ್ದೀಯಾ ಅಂತಾರೆ; ನೀತು ಶೆಟ್ಟಿ

neetushetty
Published on

ಬೆಂಗಳೂರು: ‘ಗಾಳಿಪಟ’ ಬೆಡಗಿ ನೀತು ಶೆಟ್ಟಿ ಸಾಲು ಸಾಲು ಹಿಟ್​ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಸ್ಯಾಂಡಲ್‌ವುಡ್‌ ನಟಿ ಇತ್ತೀಚೆಗೆ ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳತ್ತಿಲ್ಲ. ಈಗ ನಟಿ ಸಂದರ್ಶನವೊಂದರಲ್ಲಿ ಓಪನ್​ ಆಗಿ ಮಾತನಾಡಿದ್ದಾರೆ.

ಖಾಸಗಿ ಯುಟ್ಯೂಬರ್ ಸಂದರ್ಶನದಲ್ಲಿ ನೀತು ಮಾತನಾಡಿ, ನಾನು ಗಾಳಿಪಟ ಸಿನಿಮಾದಲ್ಲಿ ಟಾಮ್​ಬಾಯ್​ ರೋಲ್​ ಮಾಡಿರಬಹುದು. ಆದರೆ ನಾನು ನಿಜ ಜೀವನದಲ್ಲಿ ಹಾಗೆ ಅಲ್ವೆಅಲ್ಲ. ನಾನು ಇರುವುದೆ ಹೀಗೆ. ಜನ..ಜನ... ನಾನು ಬದಲಾಗುವ ಅವಶ್ಯಕತೆ ಇಲ್ಲ. ಸುಖಾಸುಮ್ಮನೆ ಎನರ್ಜಿ ಹಾಳು ಮಾಡಿಕೊಳ್ಳಬಾರದು. ಯಾರು ದಪ್ಪ, ಸಣ್ಣ ಆಗುವುದು ದೊಡ್ಡ ವಿಚಾರವಲ್ಲ. ಒಂದು ಬಾರಿ ನಾನು ಸ್ಕಿನ್​ ಪೆಗ್​ಮ್ನೆಂಟೆಶನ್​ಗೆ ಹೋಗಿದ್ದೆ, ಡಾಕ್ಟರ್​ ಹೇಳುತ್ತಿದ್ದಾರೆ, ನೀವು ಸ್ವಲ್ಪ ಸಣ್ಣ ಆಗಿ ತುಂಬಾ ಸೆಕ್ಸಿ ಆಗಿ ಕಾಣಿಸುತ್ತೀರ ಎಂದು ಹೇಳುತ್ತಾರೆ ನನಗೆ ನಂಬಲು ಸಾಧ್ಯವೆ ಆಗಲಿಲ್ಲ. ಅವರು ಕೆಟ್ಟದಾಗಿ ಏನು ಹೇಳಿಲ್ಲ. ಆದರೆ ಹೀಗೆ ಹೇಳ್ತಾ ಇದ್ದಾರಲ್ಲ ಅನ್ನಿಸಿತ್ತು ಎಂದಿದ್ದಾರೆ.

ಹಲವು ವರ್ಷಗಳ ಹಿಂದೆ ನಾನು ಮಾಡಿಸಿಕೊಂಡು ಸರ್ಜರಿ ಅನಗತ್ಯವಾಗಿತ್ತು. ಆಗ ನನ್ನ ಫ್ಯಾಮಿಲಿ ಅಥವಾ ಹತ್ತಿರದವರು ಯಾರೂ ಸರ್ಜರಿ ಮಾಡಿಸಿಕೊಳ್ಳಬೇಡಿ ಅಂತ ಹೇಳಿಲ್ಲ ಅವರಿಗೂ ನಾನು ಬದಲಾಗಬೇಕಿತ್ತು. ನಾನು ದಪ್ಪ ಇದ್ದೀನಿ ಅಂದ್ರೆ ಎಲ್ಲರಿಗೂ ಅವಮಾನ. ನನಗೆ ಮಧ್ಯಪಾನ ಆಗುವುದಿಲ್ಲ ನಾನು ಕುಡಿಯುವುದಿಲ್ಲ, ಆದರೂ ಬಂದು ಬಿಯರ್ ಕುಡಿಯಬೇಡ ಎನ್ನುತ್ತಾರೆ ಎಂದಿದ್ದಾರೆ.

ನನ್ನ ಊಟದ ಬಗ್ಗೆನೂ ಯೋಚನೆ ಮಾಡುತ್ತಾರೆ. ನೀನು ದಪ್ಪ ಇದ್ಯಾ ಅಂದ್ರೆ ದಿನ ಯಾರ ಜತೆನೂ ಇದ್ಯಾ ಅಂತ ಹೇಳುವ ಜನರಿದ್ದಾರೆ..ನನಗೆ ಬಾಯ್‌ಫ್ರೆಂಡ್‌ ಕೂಡ ಇರಲಿಲ್ಲ...ದಿನ ಒಬ್ಬೊಬ್ಬರ ಜತೆ ಮಜಾ ಮಾಡುತ್ತಿರುವ ಅನ್ನೋ ಮಾತುಗಳು ಬಂದಿದೆ ಅದು ನಿಜಕ್ಕೂ ಬೇಸರ ಆಗಿದೆ. ನನ್ನ ಬೆಡ್​​ ರೂಮ್​ವರೆಗೂ ಯೋಚನೆ ಮಾಡಿ ಕಾಮೆಂಟ್​​ ಮಾಡುವವರೂ ಇದ್ದಾರೆ. ಯಾಕೆ ನಾನು ದಪ್ಪ ಆಗಿದ್ದೇನೆ ಅಷ್ಟೆ ಕಾರಣಕ್ಕೆ ಹೀಗೆ ಮಾತನಾಡುತ್ತಾರೆ ಎಂದು ನೀತು ಹೇಳಿದ್ದಾರೆ.

ನನ್ನ ದೇಹದ ಬಗ್ಗೆ ಕಾಮೆಂಟ್ ಮಾಡಿದರೆ ನನ್ನ ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ. ದೇಹ ತೂಕದಿಂದ ಅದೆಷ್ಟೋ ನೋವು ಅನುಭವಿಸಿದ್ದೀನಿ ಎಷ್ಟೋ ಕಳೆದುಕೊಂಡಿದ್ದೀನಿ ಅದನ್ನು ಯಾರು ಅರ್ಥ ಮಾಡಿಕೊಳ್ಳುವುದಿಲ್ಲ. ತುಂಬಾ ಖುಷಿಯಾಗಿದ್ದೀರಾ ಅನ್ಸುತ್ತೆ ಅದಿಕ್ಕೆ ದಪ್ಪಗಾಗಿರುವುದು ಎಂದು ನೇರವಾಗಿ ಹೇಳುತ್ತಾರೆ. ನಾನು ಹೇಗಾದರೂ ಇರುತ್ತೀನಿ ಯಾಕೆ ದಪ್ಪ ಅಂತ ಹೇಳುತ್ತೀರಾ? ನಿಮ್ಮ ಮನೆ ಅನ್ನ ತಿನ್ನುವುದಿಲ್ಲ. ದಪ್ಪ ಇದ್ದಾರೆ ಅನ್ನೋದು ಕಾಮಿಡಿ ಮಾಡುವುದಕ್ಕೆ ಫ್ರೀ ಪಾಸ್ ಮಾಡಿಕೊಂಡು ಬಿಟ್ಟಿದ್ದಾರೆ' ಎಂದಿದ್ದಾರೆ.

'ಸಾಮಾನ್ಯವಾಗಿ ನಾನು ನಿಜ ಜೀವನದಲ್ಲಿ ಒಂಟಿಯಾಗಿ ಇರುವುದಕ್ಕೆ ಇಷ್ಟ ಪಡುತ್ತೀನಿ. ನಾನು ದಪ್ಪ ಆಗಿರುವುದಕ್ಕೆ ಇಷ್ಟೆಲ್ಲಾ ಯೋಚನೆ ಮಾಡುತ್ತಿರುವುದು ತಪ್ಪು. ಸಾಮಾಜಿಕ ಜಾಲತಾಣದಲ್ಲಿ ನಾನು ಏನೇ ವಿಭಿನ್ನವಾಗಿ ಪೋಸ್ಟ್ ಮಾಡಿದರೆ ಅಥವಾ ಕಾಮೆಂಟ್ ಮಾಡಿದರೆ ಮೊದಲು ಸಣ್ಣ ಆಗು ಆಮೇಲೆ ಅಭಿಪ್ರಾಯ ಹೇಳು ಅಂತಾರೆ'

ಕನ್ನಡ ಇಂಡಸ್ಟ್ರಿ ತುಂಬಾ ಸೇಫ್​ ಆಗಿದೆ. ನನಗೆ ಯಾರು ಚಿತ್ರರರಂಗದಲ್ಲಿ ಯಾರು ನನಗೆ ಬೆದರಿಕೆ ಹಾಕಿಲ್ಲ, ನಾನು ಯಾರಿಗೂ ಹಾಕಿಲ್ಲ... ಆದರೆ ಕೆಲವು ಡೈರೆಕ್ಟರ್​ ನಮ್ಮ ಸಮಯವನ್ನು ದುರ್ಬಳಕೆ ಮಾಡಿದವರು ಇದ್ದಾರೆ. ಅಂದ್ರೆ ಶೂಟ್​ ಇದೆ ಎಂದು ಕರೆದು ಇಂದೂ ಚಿತ್ರೀಕರಣ ಮಾಡುತ್ತಿಲ್ಲ ಎಂದು ಕಳಿಸುವ ಮೂಲಕ ನಮ್ಮ ಜತೆ ಆಟ ಆಡಿದವರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net