ನೀಟ್​ ಪರೀಕ್ಷೆಯ ಫಲಿತಾಂಶ ಪ್ರಕಟ; ಈ ವೆಬ್​ಸೈಟ್​ ಮೂಲಕ ರಿಸಲ್ಟ್​ ಚೆಕ್​ ಮಾಡಿ

neet
Published on

ನವದೆಹಲಿ: ವೈದ್ಯಕೀಯ ಕೋರ್ಸ್​ಗಳಿಗೆ ನಡೆಸಲಾಗುವ ರಾಷ್ಟ್ರೀಯ  ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (NEET) ಫಲಿತಾಂಶ ಪ್ರಕಟಗೊಂಡಿದೆ. ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (NBEMS) ಫಲತಾಂಶಗಳನ್ನು ಪ್ರಕಟಿಸಿದೆ.

ವೈದ್ಯಕೀಯ ಪ್ರವೇಶ ಪರೀಕ್ಷೆಗೆ ನೋಂದಾಯಿಸಿದ ಅರ್ಜಿದಾರರು ತಮ್ಮ ಫಲಿತಾಂಶಗಳನ್ನು https://natboard.edu.in/ ಪ್ರಕಟಗೊಂಡಿದ್ದು, ಎಲ್ಲ ಅಭ್ಯರ್ಥಿಗಳ ಅಂಕಗಳನ್ನು ಮಂಡಳಿಯು ಪ್ರಕಟಿಸಿದ್ದು,, ಸಮಗ್ರ ಸ್ಕೋರ್ ಕಾರ್ಡ್‌ಗಳನ್ನು ನಂತರ ನೀಡಲಾಗುವುದು ಎಂದು ತಿಳಿಸಿದೆ.

ಸಾಮಾನ್ಯ, ಇಡಬ್ಲ್ಯುಎಸ್‌, ಸಾಮಾನ್ಯ-ಪಿಡಬ್ಲ್ಯುಬಿಡಿ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸೇರಿದಂತೆ ವಿವಿಧ ವಿಭಾಗಗಳ ಅಭ್ಯರ್ಥಿಗಳ ಎಂಡಿ, ಎಂಎಸ್, ಡಿಎನ್‌ಬಿ ಮತ್ತು ಡಿಪ್ಲೊಮಾ ಪ್ರೋಗ್ರಾಂಗಳ ಪ್ರವೇಶ ಪರೀಕ್ಷೆಯ ಫಲಿತಾಂಶಗಳ ಜತೆಗೆ ನೀಟ್ ಪಿಜಿ ಕಟ್-ಆಫ್ ಅಂಕಗಳನ್ನೂ ಎನ್‌ಬಿಇಎಂಎಸ್‌ ಬಿಡುಗಡೆ ಮಾಡಿದೆ.

ನೀಟ್ ಪಿಜಿ 2024 ಪರೀಕ್ಷೆಯನ್ನು ಆಗಸ್ಟ್ 11ರಂದು ದೇಶದ 170 ನಗರಗಳ 416 ಕೇಂದ್ರಗಳಲ್ಲಿ ಎರಡು ಪಾಳಿಗಳಲ್ಲಿ ನಡೆಸಲಾಯಿತು. ಸುಮಾರು 2,28,540 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net