

ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ NEET-PG ಪರೀಕ್ಷೆಯ ದಿನಾಂಕವನ್ನು ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ (NBEMS) ಪ್ರಕಟಿಸಿದೆ. ಸಂಸ್ಥೆಯು ಪರೀಕ್ಷೆಯ ದಿನಾಂಕವನ್ನು ಆಗಸ್ಟ್ 11 ಎಂದು ನಿಗದಿಪಡಿಸಿದೆ. ಇದನ್ನು ಎರಡು ಪಾಳಿಯಲ್ಲಿ ನಡೆಸಲಾಗುವುದು ಎಂದು ಸಂಸ್ಥೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
NEET PG ಪರೀಕ್ಷೆಯನ್ನು ಜೂನ್ 23 ರಂದು ದೇಶಾದ್ಯಂತ ನಡೆಯಬೇಕಾಗಿತ್ತು. ಪರೀಕ್ಷೆ ಪ್ರಾರಂಭವಾಗುವ 12 ಗಂಟೆಗಳ ಮೊದಲೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪ್ರಕಟಣೆ ಹೊರಡಿಸುವ ಮೂಲಕ ಈ ಪರೀಕ್ಷೆಯನ್ನು ಮುಂದೂಡಿದೆ. ದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಸಚಿವಾಲಯವು ಮುನ್ನೆಚ್ಚರಿಕೆ ಕ್ರಮ'ವಾಗಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
NBE NEET PG 2024 ಪ್ರವೇಶ ಕಾರ್ಡ್ ಅನ್ನು ಮರು-ಬಿಡುಗಡೆ ಮಾಡಲಾಗುತ್ತದೆ. ಪರೀಕ್ಷೆಯ ಹಾಲ್ ಟಿಕೆಟ್ ಅನ್ನು ಪರೀಕ್ಷೆಯ ಹಿಂದಿನ ವಾರದಲ್ಲಿ ಡೌನ್‌ಲೋಡ್ ಮಾಡಲು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಅಭ್ಯರ್ಥಿಗಳು ನಿಮ್ಮ NEET PG ಹಾಲ್ ಟಿಕೆಟ್ ಅನ್ನು nbe.edu.in 2024 neet pgಯಿಂದ ಡೌನ್‌ಲೋಡ್ ಮಾಡಬಹುದು. ಪರೀಕ್ಷೆಗಾಗಿ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಅವು ಈ ಕೆಳಕಂಡಂತಿದೆ ಪ್ರವೇಶ ಪತ್ರದ ಹಾರ್ಡ್ ಕಾಪಿಯನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯುವುದು ಕಡ್ಡಾಯವಾಗಿದೆ.