ಫೌಲ್ನೊಂದಿಗೆ ಸ್ಪರ್ಧೆ ಆರಂಭಿಸಿದ ನೀರಜ್, 2ನೇ ಯತ್ನದಲ್ಲಿ 82.77 ಮೀ. ಎಸೆದರು. ಈ ಮೂಲಕ ಕಾಮನ್ವೆಲ್ತ್ ಅರ್ಹತೆಗೆ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ ನಿಗದಿಪಡಿಸಿದ್ದ 82.61 ಮೀ. ಮಾನದಂಡವನ್ನು ದಾಟಿದರು. 3, 4ನೇ ಯತ್ನದಲ್ಲಿ ಕ್ರಮವಾಗಿ 85.69 ಮತ್ತು 83.45 ಮೀ. ಎಸೆದರೆ, 5ನೇ ಯತ್ನದಲ್ಲಿ ಫೌಲ್ ಮಾಡಿದರು. ನೀರಜ್ ಕಳೆದ ವರ್ಷದ ದೋಹಾ ಡೈಮಂಡ್ ಲೀಗ್ನಲ್ಲಿ ಅಗ್ರಸ್ಥಾನ ಪಡೆದಿದ್ದರು.