‘ನೀನಾನಾದ್ರೆ ನಾನೀನೇನಾ’ ನಾಟಕ ಪ್ರದರ್ಶನ

Drama-games
Published on


ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಬೆಂಗಳೂರು ವಾಸ್ಪ್ ಥಿಯೇಟರ್ ವತಿಯಿಂದ ಅ.20ರಂದು ಸಂಜೆ 6.30ಕ್ಕೆ ‘ನೀನಾನಾದ್ರೆ ನಾನೀನೇನಾ’ ಎಂಬ ಹಾಸ್ಯ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ನಾಟಕದ ರಚನೆ ಎಸ್.ಸುರೇಂದ್ರನಾಥ್ ಹಾಗೂ ನಿರ್ದೇಶನ ವಿನಯ್ ಶಾಸ್ತ್ರಿ ಅವರದ್ದಾಗಿದೆ. ಶೇಕ್ಸ್‌ಪಿಯರ್ ಅವರ ಕಾಮಿಡಿ ಆಫ್ ಏರರ್ಸ್ ನಾಟಕದಿಂದ ಸ್ಫೂರ್ತಿಗೊಂಡು ಎಸ್.ಸುರೇಂದ್ರನಾಥ್ ಅವರು ಬರೆದಿರುವ ನಾಟಕ ಇದಾಗಿದೆ. ಪ್ರೇಕ್ಷಕರನ್ನು ನಗುವಿನ ಏಳು ಸುತ್ತಿನ ಕೋಟೆಗೆ ಕರೆದೊಯ್ಯುವ ಈ ನಾಟಕ, ಪ್ರತಿಯೊಂದು ಸುತ್ತಿನಲ್ಲೂ ಹಾಸ್ಯದ ರಸದೌತಣ ಉಣಬಡಿಸುತ್ತದೆ. ಮಗನ ಹುಡುಕಾಟದಲ್ಲಿ ಮಾತು ಮರೆತ ಜತೆಗಾರನೊಂದಿಗೆ ಗಾನಾಬಜಾನ ನಡೆಸುವ ತಂದೆ, ಹೆಂಡತಿಯ ಪ್ರೀತಿಯನ್ನು ಗೆಲ್ಲಲು ಶತಪ್ರಯತ್ನ ಪಡುವ ಗಂಡ, ಕಥೆ-ಕಾದಂಬರಿಯನ್ನೇ ಜೀವನದ ಕೈಪಿಡಿಯಾಗಿಸಿಕೊಂಡಿರುವ ಮುಗ್ಧ, ಗಂಡನ ಹುಡುಕಾಟದಲ್ಲೂ ಹಸಿವು ಮರೆಯದ ಹೆಂಡತಿ, ಅಕ್ಕನಿಗೆ ಬುದ್ಧಿ ಹೇಳುವ ಸಾಧನೆಯಲ್ಲಿ ಸದಾ ಸೋಲುವ ತಂಗಿ, ಯಜಮಾನನಿಗೆ ಸೋದರನಿಗಿಂತಲೂ ಮಿಗಿಲಾಗಿ ಜತೆಯಲ್ಲಿದ್ದು, ಸದಾ ಪ್ರೇಯಸಿಯ ನೆನೆವ ಭಂಟ ಹೀಗೆ… ನಾಟಕ ಸಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net