

ಕೆ.ಆರ್.ನಗರ: ತಾಲೂಕಿನ ಲಾಳಂದೇವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸಾತಿಗ್ರಾಮದ ನೀಲಮ್ಮ ಶ್ರೀನಿವಾಸ್ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
ನಿರ್ಗಮಿತ ಅಧ್ಯಕ್ಷೆ ಉಷಾ ಸೋಮಣ್ಣ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ನೀಲಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಎಸ್.ಎಂ. ಅಶೋಕ್‌ಕುಮಾರ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಈ ವೇಳೆ ಬೆಂಬಲಿಗರು ಮತ್ತು ಮುಖಂಡರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.
ಗ್ರಾ.ಪಂ. ಉಪಾಧ್ಯಕ್ಷೆ ಸಾಕಮ್ಮ ಶಿವನಂಜಯ್ಯ, ಸದಸ್ಯರಾದ ಶಿವಸ್ವಾಮಿ, ಶಂಕರ್, ಗಣೇಶ್, ಶಶಿಕುಮಾರ್, ಶಿವಣ್ಣ, ರಾಮಚಂದ್ರ, ಮಂಗಳಗೌರಿ, ಶಿವಕುಮಾರ್, ಪುಟ್ಟರಾಜು, ಚಂದ್ರಮ್ಮ, ಎಚ್.ಸಿ.ರೋಜಾ, ಲೆತಿಸಾ ಮೇರಿ, ಲಲಿತಮ್ಮ, ಎಲ್.ಎಸ್.ಹೇಮಾ ಗಿರೀಶ್, ಹೇಮಾವತಿ, ಮಹಾದೇವಿ, ಬಿ.ಎನ್.ಜಲೇಂದ್ರ ಹಾಜರಿದ್ದರು.
ಇರುವ ಸಮಯದಲ್ಲಿ ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ನೀಲಮ್ಮ ಶ್ರೀನಿವಾಸ್ ಸುದ್ದಿಗಾರರಿಗೆ ತಿಳಿಸಿದರು.