ಆನ್​ಲೈನ್-ಆಫ್​ಲೈನ್ ಸಮತೋಲನ ಅಗತ್ಯ

children
Published on
‘ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾದ ಮಕ್ಕಳ ವಿಷಯದಲ್ಲಿ ಪಾಲಕರೂ ಹೆಚ್ಚು ಜವಾಬ್ದಾರಿ ವಹಿಸಬೇಕು’ ಎನ್ನುತ್ತಾರೆ ನಿಮ್ಹಾನ್ಸ್​ನ ಕ್ಲಿನಿಕಲ್ ಸೈಕಾಲಜಿ ಪ್ರೊಫೆಸರ್ ಡಾ. ಮನೋಜ್ ಕುಮಾರ್ ಶರ್ವ. ‘ಸಾಮಾಜಿಕ ಮಾಧ್ಯಮಗಳ ಮೂಲಕವೇ ಇವತ್ತಿನ ಜನರೇಷನ್ ಕಲಿಯುತ್ತಿದೆ. ಅಧಿಕ ಫಾಲೋವರ್ಸ್ ಇರುವವರನ್ನು ನೋಡಿ, ಅದೇ ರೀತಿ ತಾವೂ ಹೆಚ್ಚು ಹಿಂಬಾಲಕರನ್ನು ಗಳಿಸಲು ಪ್ರಯತ್ನಪಡುತ್ತಾರೆ. ಹೆಚ್ಚು ಹಿಂಬಾಲಕರು ಇರುವವರು ದೊಡ್ಡವರು, ನಾವು ಸಣ್ಣವರು ಎಂಬ ಭಾವನೆಯೂ ಇರುತ್ತದೆ. ಆಗ ಸಾಮಾಜಿಕ ಜಾಲತಾಣದ ಹೊರತಾಗಿಯೂ ಜೀವನವಿದೆ ಎಂದು ಮನದಟ್ಟು ಮಾಡಿಸಬೇಕು. ಕೆಲವರು ಆನ್​ಲೈನೇ ಜೀವನ ಅಂತ ಅಂದುಕೊಂಡುಬಿಟ್ಟಿರುತ್ತಾರೆ.

ಅದರ ಹೊರತಾಗಿ ಸಂಬಂಧಗಳು, ಗೆಳೆತನಗಳ ಬಗ್ಗೆ ಗಮನಹರಿಸುವುದಿಲ್ಲ. ಜತೆಗೆ ಜಾಲತಾಣದ ಮೂಲಕ ಇವತ್ತು ಹಣ ಸಂಪಾದಿಸಬಹುದು. ಹೀಗಾಗಿ ಫಾಲೋವರ್ಸ್ ಕಡಿಮೆಯಾದಾಗ ಒತ್ತಡ ಹೆಚ್ಚಾಗುತ್ತದೆ. ಅದನ್ನು ಹೇಗೆ ನಿಭಾಯಿಸುವುದು ಎಂಬುದು ಗೊತ್ತಿರುವುದಿಲ್ಲ. ಆ ಸಮಯದಲ್ಲಿ ಪಾಲಕರು, ಶಿಕ್ಷಕರು, ಹಿರಿಯರಿಂದ ಮಾರ್ಗದರ್ಶನ ಆಗಬೇಕು. ತುಂಬ ಜನ ಅನ್​ಫಾಲೋ ಮಾಡುತ್ತಿದ್ದಾರೆ ಅಂದರೆ, ನನ್ನಲ್ಲೇ ಏನೋ ಸಮಸ್ಯೆ ಇದೆ ಅಂತ ಅನ್ನಿಸಬಹುದು. ಹೀಗೆ ಅವರನ್ನು ಆತಂಕಕ್ಕೀಡು ಮಾಡುವ ಹಲವು ಅಂಶಗಳಿವೆ. ಹೀಗಾಗಿ ಆನ್​ಲೈನ್ ಜತೆಗೆ ಆಫ್​ಲೈನ್ ಕ್ರಿಯೇಟಿವಿಟಿಯತ್ತ ಅವರು ಗಮನಹರಿಸುವಂತೆ ಮಾಡಬೇಕು. ಆನ್​ಲೈನ್​ನಲ್ಲಿ ಸಿಗುತ್ತಿರುವ ಖುಷಿ, ಆಫ್​ಲೈನ್​ನಲ್ಲೂ ಕಾಣುವುದನ್ನು ಕಲಿಯಬೇಕು. ಜನಸಂಪರ್ಕ ಗಳಿಸಬೇಕು. ಹತ್ತಿರದವರ ಬಳಿ ಹೇಳಿಕೊಳ್ಳಬೇಕು. ಆಗ ಅವರ ಗಮನ ಬೇರೆ ವಿಷಯಗಳತ್ತ ಸೆಳೆಯುವಂತೆ ಮಾಡಬಹುದು. ಮಕ್ಕಳಲ್ಲಿ ಪಾಲಕರು ಅರಿವು ಮೂಡಿಸಬೇಕು. ಆನ್​ಲೈನ್ ಮತ್ತು ಆಫ್​ಲೈನ್ ಬ್ಯಾಲನ್ಸ್ ಇರಬೇಕು’ ಎನ್ನುತ್ತಾರೆ ಡಾ.ಶರ್ವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net