ಬಿಹಾರದಲ್ಲಿ ಮತ್ತೆ ಎನ್​ಡಿಎ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದೆ; ಪ್ರಧಾನಿ ಮೋದಿ

Untitled-1
Published on

ಬಿಹಾರ​: ರಾಜ್ಯವನ್ನು 'ಬಿಮಾರು' ಆಗಿಸಿದ್ದವರಿಗೆ ಮತ ಚಲಾಯಿಸುವುದಿಲ್ಲ ಎಂದು ಬಿಹಾರದ ಜನತೆ ನಿರ್ಧರಿಸಿ ಆಗಿದೆ. ಬಿಹಾರದಲ್ಲಿ ಮತ್ತೆ ಎನ್​ಡಿಎ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದೆ ಎಂಬುದಾಗಿ ಎಲ್ಲ ಸಮೀಕ್ಷೆ, ವರದಿಗಳು ಹೇಳಿವೆ ಎಂದು ಮೋದಿ ಹೇಳಿದರು.

ಬಿಹಾರದ ಸಸಾರಾಮ್​ನ ಬಿಯಾಡ ಮೈದಾನದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಮೋದಿ ಈ ವಿಷಯ ಹೇಳಿದರು. ಕರೊನಾ ವಿರುದ್ಧ ಬಿಹಾರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ಸೂಚಿಸಿದ ಅವರು, ಬಿಹಾರ್​ನಲ್ಲಿ ಕರೊನಾ ಎದುರಿಸುವ ನಿಟ್ಟಿನಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ಆಗಿರದಿದ್ದರೆ ಇಷ್ಟರಲ್ಲಿ ಕಲ್ಪನೆಗೂ ನಿಲುಕದಷ್ಟು ಸಾವು ಸಂಭವಿಸಿರುತ್ತಿತ್ತು ಎಂದರು.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದ ಯೋಧರ ಪಾದಗಳಿಗೆ ತನ್ನ ಪ್ರಣಾಮಗಳು ಎಂದ ಮೋದಿ, ಇತ್ತೀಚೆಗಷ್ಟೇ ಅಗಲಿದ ಬಿಹಾರದ ಎಲ್​ಜೆಪಿ ನಾಯಕ ರಾಮ್​ ವಿಲಾಸ್​ ಪಾಸ್ವಾನ್​ ಹಾಗೂ ಬಾಬು ರಘುವಂಶ್​ ಪ್ರಸಾದ್ ಸಿಂಗ್​ಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net