

ನವದೆಹಲಿ: ಟೆಕ್ ದೈತ್ಯ ಗೂಗಲ್ಗೆ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ(CCI) ವಿಧಿಸಿದ್ದ 1,337.76 ಕೋಟಿ ರೂಪಾಯಿ ದಂಡವನ್ನು ನ್ಯಾಷನಲ್ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ(NCLAT) ಎತ್ತಿ ಹಿಡಿದಿದೆ.
ಅರ್ಜಿ ವಿಚಾರಣೆ ನಡೆಸಿದ ಜಸ್ಟಿಸ್ ಅಶೋಕ್ ಭೂಷಣ್, ಅಲೋಕ್ ಶ್ರೀವಾಸ್ತವ್ ಅವರಿದ್ದ ದ್ವಿಸದಸ್ಯ ಪೀಠವು ನೂತನ ನಿರ್ದೇಶನಗಳನ್ನು ಜಾರಿ ಮಾಡುವಂತೆ ಮತ್ತು 30 ದಿನದ ಒಳಗಾಗಿ ದಂಡವನ್ನು ಪಾವತಿಸುವಂತೆ ಗೂಗಲ್ಗೆ ಸೂಚಿಸಿದ್ದಾರೆ.
ಇದನ್ನೂ ಓದಿ: 10 ಅಡಿ ಸುರಂಗ ಕೊರೆದು ಚಿನ್ನಾಭರಣ ಮಳಿಗೆ ದೋಚಿದ ಕಳ್ಳರು
ತನಿಖೆ ವೇಳೆ CCIನಿಂದ ಲೋಪದೋಷವಾಗಿದೆ ಎಂದು ಆರೋಪಿಸಿ ಗೂಗಲ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಇದೇ ವೇಳೆ ನ್ಯಾಯಪೀಠವು CCIನ ಕೆಲವು ನಿಯಮಗಳಲ್ಲಿ ಮಾರ್ಪಾಡುಗಳನ್ನು ಮಾಡಿದೆ.
ಆ್ಯಂಡ್ರಾಯ್ಡ್ ಮೊಬೈಲ್ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಅಕ್ಟೋಬರ್ 20, 2022ರಂದು ಗೂಗಲ್ಗೆ CCI 1,337.76 ಕೋಟಿ ರೂಪಾಯಿ ದಂಡವನ್ನ ಹಾಕಿತ್ತು. ಇದನ್ನು ಪ್ರಶ್ನಿಸಿ NCLATಗೆ ಮೇಲ್ಮನವಿ ಸಲ್ಲಿಸಲಾಗಿತ್ತು.