VIDEO| ಟ್ರೈನಿಂಗ್​ ಹೆಸರಲ್ಲಿ ವಿದ್ಯಾರ್ಥಿಗಳನ್ನು ಅಮಾನುಷವಾಗಿ ಥಳಿಸಿದ NCC ಕೆಡೆಟ್​

NCC Thrash
Published on

ಮುಂಬೈ: ತಾನು ನೀಡಿದ ಕಸರತ್ತನ್ನು ವಿದ್ಯಾರ್ಥಿಗಳು ಸರಿಯಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ ನ್ಯಾಷನಲ್​ ಕೆಡೆಟ್​ ಕಾರ್ಪ್ಸ್​(NCC)ನ ಹಿರಿಯ ಕೆಡೆಟ್​ ಒಬ್ಬ ತನ್ನ ಜ್ಯೂನಿಯರ್​ಗಳ ಮೇಲೆ ಟ್ರೈನಿಂಗ್​ ಹೆಸರಲ್ಲಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆಯೂ ಮಹಾರಾಷ್ಟ್ರದ ಥಾಣೆಯ ಬಂದೋಡ್ಕರ್​ ಕಾಲೇಜಿನಲ್ಲಿ ನಡೆದಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಜೋರಾಗಿ ಅತ್ತರು ಬಿಡಲಿಲ್ಲ

ವೈರಲ್​ ಆಗಿರುವ ವಿಡಿಯೋದಲ್ಲಿ ಸೀನಿಯರ್ ಎನ್​ಸಿಸಿ ಕೆಡೆಟ್​ ಒಬ್ಬ ತನ್ನ 8 ಮಂದಿ ಜ್ಯೂನಿಯರ್​ಗಳನ್ನು ಮಳೆ ನೀರಿನ ನಡುವೆ ಪುಷ್​ಅಪ್​ ಪೊಸಿಷನ್​ನಲ್ಲಿ ಇರುವಂತೆ ಹೇಳುತ್ತಾನೆ. ಬಳಿಕ ಅವರ ಮೇಲೆ ದೊಡ್ಡ ಕೋಲೊಂದರಲ್ಲಿ ಅಮಾನುಷವಾಗಿ ಹಲ್ಲೆ ನಡೆಸಲು ಶುರು ಮಾಡುತ್ತಾನೆ.

ಕೆಲವರು ನೋವನ್ನು ತಾಳಲಾರದೆ ಜೋರಾಗಿ ಅಳುತ್ತಿದ್ದರು ಸಹ ಆತ ಹೊಡೆಯುವುದನ್ನು ನಿಲ್ಲಿಸುವುದಿಲ್ಲ. ಈ ಕೃತ್ಯವನ್ನು ಬಂದೋಡ್ಕರ್​ ಕಾಲೇಜಿನ ವಿದ್ಯಾರ್ಥಿಯೋರ್ವ ತನ್ನ ಮೊಬೈಲ್​ ಫೋನಿನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ಧಾನೆ. ಘಟನೆಯ ಕುರಿತು ಸಾಕಷ್ಟು ಖಂಡನೆ ವ್ಯಕ್ತವಾಗುತ್ತಿದ್ದು, ತರಬೇತಿ ಹೆಸರಲ್ಲಿ ಈ ರೀತಿ ಮಾಡುವುದು ಶಿಕ್ಷಾರ್ಹ ಎಂದು ಹಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಹಿಸಲು ಸಾಧ್ಯವಿಲ್ಲ

ಈ ಕುರಿತು ಪ್ರತಿಕ್ರಿಯಿಸಿರುವ ಬಂದೋಡ್ಕರ್​ ಕಾಲೇಜು ಪ್ರಾಂಶುಪಾಲರಾದ ಸುಚಿತ್ರಾ ನಾಯ್ಕ್​ ಇಂತಹ ವರ್ತನೆಯನ್ನು ನಾವು ಯಾವುದೇ ಕಾರಣಕ್ಕು ಸಹಿಸುವ ಮಾತಿಲ್ಲ. ಕಳೆದ 40 ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ಎನ್​ಸಿಸಿ ತರಬೇತಿ ಕೊಡಲಾಗುತ್ತಿದ್ದು, ಶಿಕ್ಷಕರ ಅನುಪಸ್ಥಿತಿಯಲ್ಲಿ ಈ ಘಟನೆ ನಡೆದಿದೆ.

ಹಲ್ಲೆ ಮಾಡಿರುವ ಎನ್​​ಸಿಸಿ ವಿದ್ಯಾರ್ಥಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಈ ರೀತಿಯ ವರ್ತನೆಯನ್ನು ಯಾವುದೇ ಕಾರಣಕ್ಕು ಆಡಳಿತ ಮಂಡಳಿ ಸಹಿಸುವುದಿಲ್ಲ ಎಂದು ಬಂದೋಡ್ಕರ್​ ಕಾಲೇಜು ಪ್ರಾಂಶುಪಾಲರಾದ ಸುಚಿತ್ರಾ ನಾಯ್ಕ್ ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net