

ಅಮೆರಿಕ: ಅತಿ ಕಿರಿಯ ವಯಸ್ಸಿಗೆ "ಮಿಸ್ ವೆನಿಜುವೆಲಾ" ಪಟ್ಟವನ್ನು ಮುಡಿಗೇರಿಸಿಕೊಂಡಿದ್ದ ಖ್ಯಾತ ರೂಪದರ್ಶಿ ಅರಿಯಾನಾ ವಿಯೆರಾ ವಿಧಿವಶರಾಗಿದ್ದಾರೆ. ಅವರಿಗೆ 26 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.
ಜುಲೈ 13ರಂದು ಸಂಭವಿಸಿದ ಭೀಕರ ರಸ್ತೆ ಅಪಘಅತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅರಿಯಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಗಸ್ಟ್ 3ರಂದು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ ಎಂದು ಅವರ ತಾಯಿ ವಿವಿಯನ್ ಓಚೋವಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಜುಲೈ 13ರಂದು ದಕ್ಷಿಣ ಅಮೆರಿಕದಲ್ಲಿರುವ ಒರ್ಲ್ಯಾಂಡೊದ ಹೆದ್ದಾರಿಯಲ್ಲಿ ಅರಿಯಾನಾ ಸಂಚರಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ನಟಿ, ರೂಪದರ್ಶಿಯಾಗಿರುವ ಅರಿಯಾನಾ ವಿಯೆರಾ 2023ರಲ್ಲಿ "ಮಿಸ್ ವೆನಿಜುವೆಲಾ" ಪಟ್ಟವನ್ನು ಮುಡಿಗೇರಿಸಿಕೊಂಡಿದ್ದರು.
ವಿಯೆರಾ ಅವರ ಸಾವು ಹಲವು ರೀತಿಯ ಚರ್ಚೆಗಳನ್ನು ಹುಟ್ಟುಹಾಕಿದ್ದು, ಎರಡು ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಸ್ವತಃ ತಮ್ಮ ಅಂತ್ಯೆಕ್ರಿಯೆಯ ಕುರಿತ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು.