ಟ್ರಾಲಿ ಬ್ಯಾಗ್​ನಲ್ಲಿ ಹೆರಾಯಿನ್ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದ ಮಹಿಳೆ; 2.91 ಕೆ.ಜಿ. ಮಾದಕವಸ್ತು ವಶ

Feature
Published on

ಬೆಂಗಳೂರು: ಟ್ರಾಲಿ ಬ್ಯಾಗ್​ನಲ್ಲಿ ಹೆರಾಯಿನ್ ಸಾಗಿಸುತ್ತಿದ್ದ 30 ವರ್ಷದ ಮಹಿಳೆ ಎನ್​ಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಇದೀಗ ಮಾದಕವಸ್ತು ಸಮೇತ ಪೊಲೀಸರ ವಶವಾಗಿದ್ದಾಳೆ. ಜಿಂಬಾಬ್ವೆಯ ಶೆರಾನ್ ಚಿಗ್ವಾ ಬಂಧಿತ ಆರೋಪಿ.

ಜೋಹಾನ್ಸ್‌ಬರ್ಗ್‌‌ನಿಂದ ಕೊಚ್ಚಿಗೆ ಬಂದಿಳಿದ ಜಿಂಬಾಬ್ವೆ ಮೂಲದ ಈ ಮಹಿಳೆಯನ್ನು ಚೆನ್ನೈ ವಲಯದ ಎನ್​ಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈಕೆ ಟ್ರಾಲಿ ಬ್ಯಾಗ್​ನಲ್ಲಿ ಹೆರಾಯಿನ್​ನನ್ನು ತುಂಬಿಸಿಕೊಂಡು ಅದನ್ನು ದೆಹಲಿಗೆ ತಲುಪಿಸಲು ಮುಂದಾಗಿದ್ದಳು.

ನೈಜೀರಿಯಾ ಮೂಲದ ವ್ಯಕ್ತಿಯಿಂದ ಪಡೆದಿದ್ದ ಈ ಮಾದಕವಸ್ತುವನ್ನು ಬೆಂಗಳೂರು ಮಾರ್ಗವಾಗಿ ದೆಹಲಿಗೆ ಪ್ರಯಾಣಿಸುವ ಮುನ್ನವೇ ಎನ್​ಸಿಬಿ ಅಧಿಕಾರಿಗಳು ಈಕೆಯನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡಿರುವ ಬ್ಯಾಗ್​ನಲ್ಲಿ 2.91 ಕೆ.ಜಿ. ಹೆರಾಯಿನ್ ಇದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net