10 ವರ್ಷದ ಹಿಂದೆ ಶಾರುಖ್​ನ ತಡೆಹಿಡಿದಿದ್ದರು, ಎನ್​ಸಿಬಿ ನಿರ್ದೇಶಕ ಸಮೀರ್​ ವಾಂಖೇಡೆ!

srk
Published on

ಮುಂಬೈ: ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ರನ್ನು ಬಂಧಿಸಲಾಗಿರುವ ಮುಂಬೈ ಕ್ರೂಸ್​ ಶಿಪ್​ ಡ್ರಗ್ಸ್​ ಕೇಸಿನ ತನಿಖೆಯ ಮುಂದಾಳತ್ವ ವಹಿಸಿರುವ ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ(ಎನ್​ಸಿಬಿ)ದ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಹಲವು ಆರೋಪಗಳಿಗೆ ತುತ್ತಾಗಿದ್ದಾರೆ. ಇದೀಗ ಅವರ ಬಗ್ಗೆ ಹತ್ತು ವರ್ಷದ ಹಿಂದಿನ ಮತ್ತೊಂದು ವಿಷಯ ಜಾಹೀರಾಗಿದೆ.

2011 ನೇ ಇಸವಿಯಲ್ಲಿ ವಾಂಖೇಡೆ ಅವರು ಕಸ್ಟಮ್ಸ್​ ಸಹಾಯಕ ಕಮಿಷನರ್ ಆಗಿದ್ದಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್​ ಖಾನ್​​ರನ್ನು ತಡೆಹಿಡಿದಿದ್ದರು. ಸುಮಾರು 20 ಬ್ಯಾಗ್​ಗಳನ್ನು ಹೊತ್ತು ತಂದಿದ್ದ ಶಾರುಖ್​ರನ್ನು ಗಂಟೆಗಟ್ಟಲೆ ವಿಚಾರಣೆ ನಡೆಸಲಾಗಿತ್ತು. ತದನಂತರ 1.5 ಲಕ್ಷ ರೂಪಾಯಿ ಕಸ್ಟಮ್ಸ್​ ಡ್ಯೂಟಿ ಕಟ್ಟಲು ಹೇಳಿ ಅವರನ್ನು ಹೋಗಲು ಬಿಡಲಾಗಿತ್ತು ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net