ದುಬೈನಲ್ಲಿ ಸಫಾರಿ ಆನಂದಿಸಿದ ನಯನತಾರಾ ದಂಪತಿ: ಜಿರಾಫೆ ಜೊತೆ ಮಕ್ಕಳ ಆಟದ ವಿಡಿಯೋ ವೈರಲ್​ |

dk-60-677e73a3648af
Published on

ಬೆಂಗಳೂರು: ಸದಾ ಸಿನಿಮಾಗಳ ವಿಷಯಗಳಲ್ಲಿ ಬ್ಯೂಸಿ ಇರುವ ತಮಿಳಿನ ಲೇಡಿ ಸೂಪರ್​ ಸ್ಟಾರ್​ ಎಂದೇ ಖ್ಯಾತಿ ಹೊಂದಿರುವ ನಟಿ ನಯನತಾರ ಮತ್ತು ಪತಿ ವಿಘ್ನೇಶ್ ಶಿವನ್​ ಇದೀಗ ದುಬೈ ಸಫಾರಿಯನ್ನು(safari) ಆನಂದಿಸುತ್ತಿದ್ದಾರೆ.

ಹೌದು, ಮಕ್ಕಳಾದ ಉಯಿರ್ ಮತ್ತು ಉಲಗ್ ಜತೆ ಜಿರಾಫೆಗೆ ಹುಲ್ಲು ತಿನ್ನಿಸುತ್ತಿರುವ ವಿಡಿಯೋಂದು ವೈರಲ್​ ಆಗಿದೆ.

ಉಯಿರ್ ಮತ್ತು ಉಲಗ್ ಅವರೊಂದಿಗೆ ನಯನತಾರಾ ದಂಪತಿ ತಮ್ಮ ಜೀವನದ ಅತ್ಯುತ್ತಮ ಸಮಯವನ್ನು ಕಳೆಯುತ್ತಿದ್ದಾರೆ. ಇನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ನಯನತಾರಾ ದಂಪತಿ ಮತ್ತು ಮಕ್ಕಳ ಜೊತೆ ದುಬೈ ಟ್ರಿಪ್​ನ ಪ್ರವಾಸವನ್ನು ಅನುಭವಿಸುತ್ತಿರುವುದು ಕಾಣುತ್ತದೆ.

ವಿಡಿಯೋದಲ್ಲಿ ಏನಿದೆ?

‘’ಮೊದಲ ಬಾರಿಗೆ ಜಿರಾಫೆಯನ್ನು ನೋಡಿ ಆಕರ್ಷಿತರಾದ ಪುಟಾಣಿಗಳ ಕುತೂಹಲದ ಕಣ್ಣುಗಳು ಎಲ್ಲರ ಗಮನ ಸೆಳೆದವು. ತಮ್ಮ ಹೆತ್ತವರ (ನಯನತಾರಾ) ಮಾರ್ಗದರ್ಶನವನ್ನು ಅನುಸರಿಸಿ, ಮಕ್ಕಳು ಜಿರಾಫೆಗೆ ಹುಲ್ಲು ತಿನ್ನಿಸಿದರು ವಿಡಿಯೋದಲ್ಲಿದೆ’’.

ಈ ಹಿಂದೆ, ದಂಪತಿಗಳು ತಮ್ಮ ದುಬೈನ ಪ್ರವಾಸಿ ದಿನಗಳನ್ನು ಹಲವಾರು ತಮ್ಮ ಪೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದೀಗ, ವಿಹಾರ ನೌಕೆ ಸವಾರಿ ಮತ್ತು ಬೀಚ್‌ನಲ್ಲಿ ಮಕ್ಕಳೊಂದಿಗೆ ತಮ್ಮ ಸಮಯವನ್ನು ಆನಂದಿಸುವುದನ್ನು ಕಾಣಬಹುದು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net