

ಮುಂಬೈ: 2024ರಲ್ಲಿ ತಾಯಿಯಾದ ಮಹಿಳೆಯರಿಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೊಸ ವರ್ಷದಲ್ಲಿ ಹೊಸ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
ಹೌದು, 2024ರ ಸೆ.8ರಂದು ಹೆಣ್ಣು ಮಗವಿಗೆ ಜನ್ಮ ನೀಡುವ ಮೂಲಕ ತಾಯಿಯಾದ ದೀಪಿಕಾ ಎಲ್ಲಾ ತಾಯಂದಿರಿಗೆ ಭಾವನತ್ಮಾಕ ಮತ್ತು ಮಹಿಳೆಯರ ಸಬಲೀಕರಣ ಕುರಿತು ಹೇಳುವ ಪೋಸ್ಟ್ವೊಂದನ್ನು ತನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಇದೀಗ ಈ ಪೋಸ್ಟ್ ವೈರಲ್ ಆಗುತ್ತಿದೆ.
‘’2024ರಲ್ಲಿ ಜನ್ಮ ನೀಡಿದ ಅಮ್ಮಂದಿರೆ..ಇದನ್ನು ನೆನಪಿಡಿ.. ವರ್ಷದ ಕೊನೆಯಲ್ಲಿ ನಿಮ್ಮ ಪ್ರಮುಖ ದಿನಗಳನ್ನು ಒಮ್ಮೆ ಹಿಂತಿರುಗಿ ನೋಡಿ. ಈ ವರ್ಷ ನಿಮ್ಮ ದೇಹ ದೊಡ್ಡದಾಗಿ ಮತ್ತೊಂದು ದೇಹಕ್ಕೆ(ಮಗು) ಜನ್ಮ ನೀಡಿದೆ ಎಂದು ನೆನಪಿಸಿಕೊಳ್ಳಿ? ಎಲ್ಲವನ್ನು ಮೀರಿ ಬೆಳದಿದ್ದಿರಾ(ಎಲ್ಲವೂ ನಿಮ್ಮಿಂದ ಸಾಧ್ಯ)'' ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಮುಂಬೈನ ಹೊರಗೆ ದೀಪಿಕಾ ಮತ್ತು ರಣವೀರ್ ಸಿಂಗ್ ಹೊಸ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸಂಭ್ರಮಾಚರಣೆಯಲ್ಲಿ ಮೊಳಗಿದರು.ಬಳಿಕ ಮಾಲ್ಡೀವ್ಸ್ನಲ್ಲಿ ದೀಪಿಕಾ ಹುಟ್ಟುಹಬ್ಬವನ್ನು ಆಚರಿಸಿದರು.
ಇನ್ನು ದಂಪತಿಗಳು ಇತ್ತೀಚಿಗೆ ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ, ಫೋಟೋಗೆ ಪೋಸ್ ನೀಡಿ ನೆರದಿದ್ದವರನ್ನು ಸಂತೋಷಪಡಿಸಿದರು.(ಏಜೆನ್ಸೀಸ್)