

ಮುಂಬೈ: ತಮ್ಮ ಹಿರಿಯ ಮಗನ ಜುನೈದ್ ಅವರ ಎರಡನೇ ಸಿನಿಮಾ ಲವ್ಯಾಪ(Loveyapa) ಚಿತ್ರ ಬಾಕ್ಸ್ಆಫಿಸ್ನಲ್ಲಿ ಧೂಳ್ ಎಬ್ಬಿಸಿದರೆ ನಾನು ಸಿಗರೇಟ್(ಧೂಮಪಾನ) ಬಿಡುತ್ತೇನೆ ಎಂದು ಬಾಲಿವುಡ್ ನಟ ಅಮಿರ್ಖಾನ್ ಭರವಸೆ ನೀಡಿದ್ದಾರೆ.
ಇತ್ತೀಚಿನ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಅಮಿರ್ ಖಾನ್, ‘’ ತಮ್ಮ ಮಗನ ಸಿನಿಮಾ ಹಿಟ್ ಆಗಲಿದೆ. ಅಲ್ಲದೆ, ನಾನು ಖಂಡಿತ ಧೂಮಪಾನ ಬಿಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ’’
‘ನಗೆ ಈ ಚಿತ್ರ ತುಂಬಾ ಇಷ್ಟವಾಯಿತು. ಇದು ಎಲ್ಲರಿಗೂ ಹಿಡಿಸುವ ಮನರಂಜನೆ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಮೊಬೈಲ್ ಪೋನ್ಗಳಿಂದಾಗಿ ಮನುಷ್ಯರ ದೈನಂದಿನ ಜೀವನ ಹೇಗೆ ಬದಲಾಗಿದೆ. ಮತ್ತು ತಂತ್ರಜ್ನಾನದಿಂದ ಹೇಗೆ ಜೀವನ ಸಾಗುತ್ತದೆ ಎಂಬ ಆಸಕ್ತಿದಾಯಕ ವಿಷಯಗಳನ್ನು ತೋರಿಸಲಾಗಿದೆ. ಈ ಚಿತ್ರದಲ್ಲಿ ಪ್ರತಿಯೊಬ್ಬರು ತುಂಬಾ ಚೆನ್ನಾಗಿ ಪಾತ್ರ ನಿರ್ವಹಿಸಿದ್ದಾರೆ. ಅಲ್ಲದೆ. ನಟಿ ಶ್ರೀದೇವಿಯ ದೊಡ್ಡ ಫ್ಯಾನ್ ನಾನು. ಅವರ ಕುಟುಂಬಸ್ಥರು ಕೂಡ ಚಿತ್ರದಲ್ಲಿ ಇದ್ದು ಅದ್ಭುತ ನಟನೆ ಮಾಡಿದ್ದಾರೆ’ ಎಂದು ಅಮಿರ್ಖಾನ್ ಹೇಳಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ Loveyapa ಚಿತ್ರ ರೋಮ್ಯಾಂಟಿಕ್ ಆಧಾರಿತ ಚಿತ್ರವಾಗಿದ್ದು, ಜುನೈದ್ ಮತ್ತು ಖುಷಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಾಲ್ ಸಿಂಗ್ ಚಡ್ಡಾ ಖ್ಯಾತಿಯ ಅದ್ವೈತ್ ಚಂದನ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ವರದಿಗಳ ಪ್ರಕಾರ, ಇದೇ ಜನವರಿ 10ರಂದು ಅಮಿರ್ಖಾನ್ ಈ ಸಿನಿಮಾದ ಟ್ರೈಲರ್ ಬಿಡಿಗಡೆ ಮಾಡಲಿದ್ದಾರೆ. ಫೆ.7ರಂದು ಸಿನಿಮಾ ಬಿಡುಗಡೆಗೊಳ್ಳಲಿದೆ. (ಏಜೆನ್ಸೀಸ್)