ಕೇರಳ: 13 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಧಾರಣೆ ಮಾಡಿದ ಆರೋಪದ ಮೇಲೆ 45ರ ತಂದೆಗೆ 47 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್, 15 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಕಾತರ್ನಲ್ಲಿ ರೆಸ್ಟೋರೆಂಟ್ ಹೊಂದಿರುವ ಕಣ್ಣೂರು ಮೂಲದ ನಿವಾಸಿ ಆರೋಪಿ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ತಾಯಿ ದೂರಿನ ಮೇರೆಗೆ ಇತನ ವಿರುದ್ಧ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. 2020ರ ಕರೊನಾದ ಲಾಕ್ಡೌನ್ ಸಮಯದಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಸಾಬಿತಾದ ಹಿನ್ನೆಲೆ ಶಿಕ್ಷೆಗೆ ಗುರಿಯಾಗಿದ್ದಾನೆ.
ಇದನ್ನೂ ಓದಿ:Director Mansore | ಇತ್ತೀಚಿನ ಸಿನಿಮಾಗಳೇಲ್ಲವೂ ಈವೆಂಟ್ ರೀತಿಯಲ್ಲಿ ನಡೆಯುತ್ತಿದೆ; ನಿರ್ದೇಶಕ ಮಂಸೋರೆ
ಕತಾರ್ನಿಂದ ಕಣ್ಣೂರಿನ ಮನೆಗೆ ಬಂದ ತಂದೆ, ಕೋವಿಡ್ ಹಿನ್ನೆಲೆ ಮಗಳ ಜತೆ ಒಂದೇ ರೂಮ್ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದೇ ಸಮಯವನ್ನು ಬಳಸಿಕೊಂಡ ಆರೋಪಿ ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ, ಏಳು ತಿಂಗಳ ಬಳಿಕ ಕಾತರ್ಗೆ ಹಿಂತಿರುಗುವ ವೇಳೆಗೆ ಪದೇಪದೆ ಈ ಕೃತ್ಯ ಎಸಗಿದ್ದಾನೆ.
ಬಾಲಕಿಗೆ ಪದೇಪದೆ ಅನರೋಗ್ಯ ಹಿನ್ನೆಲೆ ಶಂಕಿಸಿದ ತಾಯಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಲೈಂಗಿಕ ದೌರ್ಜನ್ಯ ಹಿನ್ನೆಲೆ ಬಾಲಕಿ ಗರ್ಭಧರಿಸಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಬಾಲಕಿ ತಾಯಿ ದೂರಿದ್ದಾಳೆ. ಆದರೆ, ನನ್ನ ಮೇಲೆ ಒಬ್ಬ ಹುಡುಗನಿಂದ ಈಕೃತ್ಯ ನಡೆದಿದೆ ಎಂದು ತಪ್ಪು ಮಾಹಿತಿ ನೀಡಿದ ಬಾಲಕಿಯಿಂದ ತನಿಖೆ ಹಳ್ಳಹಿಡಿದೆ.
ಇದನ್ನೂ ಓದಿ:ಸಾಹಿತ್ಯ ಓದುವ ವಿಚಾರದಲ್ಲಿ ರಾಜಕೀಯ: ಕಾದಂಬರಿಕಾರ ಗುರುಪ್ರಸಾದ್ ಕಂಟಲಗೆರೆ ಅನುಮಾನ
ಬಳಿಕ ಬಾಲಕಿಯನ್ನು ಮತ್ತು ಕುಟುಂಬಸ್ಥರನ್ನು ತನಿಖೆ ಮಾಡಿದಾಗ ತಂದೆನೆ ನನ್ನ ಮೇಲೆ ಕೃತ್ಯ ಎಸಗಿದ್ದಾನೆ ಎಂದು ಬಾಲಕಿ ಹೇಳಿದಾಗ ತಂದೆಯ ಡಿಎನ್ಎ(DNA) ಟೆಸ್ಟ್ ಮಾಡಲಾಗಿದೆ. ಈ ಹಿನ್ನೆಲೆ ಆರೋಪಿ ತಂದೆ ಸಿಕ್ಕಿಬಿದಿದ್ದಾನೆ. ಬಾಲಕಿ ಸದ್ಯ ಸರ್ಕಾರಿ ಅರೈಕೆಯಲ್ಲಿದ್ದಾಳೆ. ಚೇತರಿಕೆಯಾಗುತ್ತಿದ್ದಾಳೆ. ನ್ಯಾಯಾಲಯದ ಆದೇಶದ ಮೇರೆಗೆ ಬಾಲಕಿಯ ಗರ್ಭಪಾತಕ್ಕೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್)
1950ರ ದಶಕದ 100 ರೂ. ನೋಟು 56 ಲಕ್ಷ ರೂ.ಗೆ ಹರಾಜು: ಈ ಕೆರೆನ್ಸಿಯ ವಿಶೇಷತೆ ಹೀಗಿದೆ